ದ್ಯುತಿಗೆ 100 ಮೀ. ಓಟದಲ್ಲಿ ಚಿನ್ನ

Update: 2019-08-16 18:33 GMT

ಪಾಟಿಯಾಲ, ಆ.16: ಸ್ಟಾರ್ ಓಟಗಾರ್ತಿದ್ಯುತಿ ಚಂದ್ ಇಲ್ಲಿನ ನೇತಾಜಿ ಸುಭಾಸ್‌ಚಂದ್ರ ಬೋಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಇಂಡಿಯನ್ ಗ್ರ್ಯಾನ್‌ಪ್ರಿಯ 100 ಮೀ.ಓಟದಲ್ಲಿ 11.42 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡರು.

ತಮಿಳುನಾಡಿನ ಅರ್ಚನಾ ಅವರು ದ್ಯುತಿಗೆ ತೀವ್ರ ಸ್ಪರ್ಧೆ ಒಡ್ಡಿ 11.53 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರು. ಪಂಜಾಬ್‌ನ ಓಟಗಾರ್ತಿ ಮನ್ವೀರ್ ಕೌರ್(12.28 ಸೆ.)ಕಂಚಿನ ಪದಕ ಜಯಿಸಿದರು.

ಮಹಿಳೆಯರ ಡಿಸ್ಕಸ್ ಎಸೆತದಲ್ಲಿ ಸ್ಥಳೀಯ ಅಥ್ಲೀಟ್ ನವಜೀತ್ ಕೌರ್ ದಿಲ್ಲೋನ್ 52.44 ಮೀ. ದೂರಕ್ಕೆ ಡಿಸ್ಕಸ್ ಎಸೆದು ಚಿನ್ನ ಜಯಿಸಿದರು. ಬಂಗಾಳದ ಸುರಾವಿ ಬಿಸ್ವಾಸ್(51.42 ಮೀ.) ಎರಡನೇ ಸ್ಥಾನ ಪಡೆದರು.

8.00 ಮೀ. ದೂರಕ್ಕೆ ಜಿಗಿದ ಲಾಂಗ್‌ಜಂಪ್ ಪಟು ಶ್ರೀಶಂಕರ್ ಮೊದಲ ಸ್ಥಾನ ಪಡೆದರು.ಕರ್ನಾಟಕದ ಸಿದ್ದಾರ್ಥ್ ನಾಯಕ್(7.56 ಮೀ.)ಎರಡನೇ ಸ್ಥಾನ ಪಡೆದರು. ಹರ್ಯಾಣದ ಸಾಹಿಲ್ ಮಹಾಬಲಿ 3ನೇ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News