ಆ.19 ರಿಂದ ನೆರೆ ಬಾಧಿತ ಗ್ರಾಮಗಳಿಗೆ ಸಿದ್ದರಾಮಯ್ಯ ಭೇಟಿ

Update: 2019-08-17 14:17 GMT

ಬೆಂಗಳೂರು, ಆ.17: ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ನೆರೆ ಹಾವಳಿಯಿಂದ ಬಾಧಿತವಾಗಿರುವ ಗ್ರಾಮಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ.19 ರಿಂದ 21ರವರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದೇ ವೇಳೆ ಪರಿಹಾರ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಆ.19ರಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ನಿರ್ಗಮಿಸಲಿರುವ ಅವರು 9.15ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಲಿದ್ದಾರೆ. 9.40ಕ್ಕೆ ಹುಬ್ಬಳಿ ವಿಮಾನ ನಿಲ್ದಾಣದಿಂದ ನರಗುಂದ-ರೋಣ ಮಾರ್ಗದ ಮೂಲಕ ಮಣ್ಣೇರಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

ಆನಂತರ ಢಾಣಕಶಿರೂರ, ಹಿರೇನಸಬಿ, ನವಿಲುಹೊಳೆ, ಮಂಗಳೂರು, ಶಿರಬಡಗಿ, ಗೋನಾಳ, ಕಾಟಾಪೂರ, ಮಂಗಳ ಗುಡ್ಡ, ಚಿಮ್ಮಲಗಿ, ಪಟ್ಟದಕಲ್ಲು ಗ್ರಾಮಗಳಿಗೆ ಭೇಟಿ ನೀಡಿದ ಬಳಿಕ ಬಾದಾಮಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆ.20ರಂದು ಬಾದಾಮಿಯಿಂದ ನಿರ್ಗಮಿಸಲಿರುವ ಸಿದ್ದರಾಮಯ್ಯ, ಕರ್ಲಕೊಪ್ಪ, ಹಾಗನೂರ, ಆಲೂರ ಎಸ್.ಕೆ., ತಳಕವಾಡ, ಬೀರನೂರ, ಗೋವನಕೊಪ್ಪ, ಕಳಸ, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ, ಮುಮರಡಿಕೊಪ್ಪ, ಜಕನೂರ, ನೀರಲಗಿ, ಬೂದಿಹಾಳ, ತಮಿನಾಳ, ಕಾತರಕಿ, ಖ್ಯಾಡ, ಚೊಳಚಗುಡ್ಡ ಗ್ರಾಮಗಳಿಗೆ ಭೇಟಿ ನೀಡಿದ ಬಳಿಕ ಬಾದಾಮಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಆ.21ರಂದು ಬಾದಾಮಿಯಿಂದ ನಿರ್ಗಮಿಸಲಿರುವ ಸಿದ್ದರಾಮಯ್ಯ, ನೆಲವಗಿ, ನಂದಿಕೇಶ್ವರ, ಬಿ.ಎನ್.ಜಾಲಿಹಾಳ, ಬಾಚಿನಗುಡ್ಡ, ನಾಗರಾಳ ಎಸ್.ಪಿ, ಸಬ್ಬಲಹುಣಶಿ, ಲಾಯದಗುಂದಿ, ಕೊಟ್ನಳ್ಳಿ, ಕಟಗಿನಹಳ್ಳಿ, ಆಸಂಗಿ, ಅಲ್ಲೂರ ಎಸ್.ಪಿ., ಹಳದೂರ, ಇಂಜಿನವಾರಿ ಗ್ರಾಮಗಳಿಗೆ ಭೇಟಿ ನೀಡಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News