ವನ್ಯಜೀವಿ ಬೇಟೆಗೆ ಉರುಳು: ಆರೋಪಿ ಬಂಧನ

Update: 2019-08-18 18:37 GMT

ಹನೂರು, ಆ.18: ವನ್ಯಜೀವಿಗಳನ್ನು ಬೇಟೆಯಾಡಲು ಕಾಡಿನೊಳಗೆ ರಾತ್ರಿ ವೇಳೆ ಉರುಳು ಹಾಕಿ ಹೊಂಚು ಹಾಕುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ವಲಯದ ಅರಣ್ಯಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತಾಲೂಕಿನ ಹಳೆಮಾರ್ಟಳ್ಳಿ ಗ್ರಾಮದ ರಾಜಖನ್ನನ್ (74) ಬಂಧಿತ ಅರೋಪಿ. ರಾತ್ರಿ ವೇಳೆ ಕಾಡಿನೊಳಗೆ ಪ್ರಾಣಿಗಳ ಬೇಟೆಯಾಡುವ ಉದ್ದೇಶದಿಂದ ಉರುಳು ಹಾಕಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ರಾಜಖನ್ನನ್ ನನ್ನು ಬಂಧಿಸಿದ್ದಾರೆ. ಈ ವೇಳೆ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.         

ಅರಣ್ಯಾಧಿಕಾರಿಗಳು ಉರುಳು ಹಾಕಲು ಬಳಸುತ್ತಿದ್ದ ಉಪಕರಣಗಳ ಜೊತೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಒಣಹುಣಸೇಪಟ್ಟಿ ಗಸ್ತಿನಲ್ಲಿ  ನಡೆದಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದಿವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News