ನಾಳೆ ಬಿಎಸ್ ವೈ ಸಚಿವ ಸಂಪುಟ ವಿಸ್ತರಣೆ

Update: 2019-08-19 07:38 GMT

ಬೆಂಗಳೂರು, ಆ.19: ಕುತೂಹಲ ಕೆರಳಿಸಿದ್ದ ಮುಖ್ಯ ಮಂತ್ರಿ ಬಿ.ಎಸ್.ಯುಡಿಯೂರಪ್ಪ ನೇತೃತ್ವದ ರಾಜ್ಯ  ಸಚಿವ ಸಂಪುಟ ಮಂಗಳವಾರ  ವಿಸ್ತರಣೆಯಾಗುವುದು ಖಚಿತವಾಗಿದ್ದು, ನೂತನ ಸಚಿವರ ಪ್ರಮಾಣ ವಚನ  ಸ್ವೀಕಾರ ಸಮಾರಂಭಕ್ಕೆ   ರಾಜಭವನದಲ್ಲಿ ತಯಾರಿ ನಡೆದಿದೆ. 

 "ಸಚಿವ ಸಂಪುಟ   ವಿಸ್ತರಣೆ ನಾಳೆ ಬೆಳಿಗ್ಗೆ 10: 30 ರಿಂದ 11: 30 ರ ನಡುವೆ ನಡೆಯಲಿದೆ. ಈ ಬಗ್ಗೆ ನಾನು ಈಗಾಗಲೇ ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಎಲ್ಲಾ ವ್ಯವಸ್ಥೆಗಳನ್ನು ಮಾಡಲು ನಾನು ಮುಖ್ಯ ಕಾರ್ಯದರ್ಶಿಯನ್ನು ಕೇಳಿದ್ದೇನೆ " ಎಂದು  ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ  ಮಾಹಿತಿ ನೀಡಿದ್ದಾರೆ.

13-14  ಮಂದಿ ನೂತನ ಸಚಿವರು ಸಂಪುಟ  ಸೇರಲಿದ್ದಾರೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ  ತಿಳಿಸಿದ್ದಾರೆ

ಸಂಪುಟದಲ್ಲಿ ಸಚಿವರಾಗಿ ಯಾರೆಲ್ಲ ಇರುತ್ತಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ   ಸೋಮವಾರ ಸಂಜೆಯೊಳಗೆ ಸಚಿವರ ಪಟ್ಟಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೈ ಸೇರಲಿದೆ.  ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್  ಅವರು ದಿಲ್ಲಿಯಿಂದ ಸಚಿವರ ಪಟ್ಟಿಯನ್ನು ತರಲಿದ್ದಾರೆ  ಎಂದು ಮೂಲಗಳು ತಿಳಿಸಿವೆ. 

ಬಿಜೆಪಿ ಹೈಕಮಾಂಡ್ ಯಾರಿಗೆಲ್ಲಾ ಸಚಿವ ಸ್ಥಾನ ನೀಡಿಲಿದೆ ಎನ್ನವುದು ಸ್ವತ: ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೂ ಗೊತ್ತಿಲ್ಲ . ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಬಿಜೆಪಿಯ  ಕೆಲವು ಹಿರಿಯ ಶಾಸಕರಿಗೂ  ಸಚಿವ ಸ್ಥಾನ ತಪ್ಪುವ ಸಾಧ್ಯತೆ ಇದೆ. ಪಕ್ಷೇತರ ಶಾಸಕ ಎಚ್.ನಾಗೇಶ್ ಅವರಿಗೂ ಸಚಿವ ಸ್ಥಾನ ದೊರೆಯಲಿದೆ. 3 ಅಥವಾ 4  ಮಂದಿ ಹೊಸಬರಿಗೂ ಸಚಿವರಾಗುವ ಯೋಗ ಒಲಿದು ಬರಲಿದೆ ಎಂದು ಮೂಲಗಳು ತಿಳಿಸಿವೆ.

ಹಲವು ಮಂದಿ  ಸಚಿವ ಸ್ಥಾನದ  ಆಕಾಂಕ್ಷಿಗಳು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಭೇಟಿಯಾಗಿ ಇಂದು ಮಾತುಕತೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News