ಉದ್ದೇಶಿತ ಸಂಖ್ಯೆಯ ಉದ್ಯೋಗ ಸೃಷ್ಟಿಗೆ ‘ಮೇಕ್ ಇನ್ ಇಂಡಿಯಾ' ವಿಫಲ : ಎಲ್&ಟಿ ಮುಖ್ಯಸ್ಥ ನಾಯ್ಕ್

Update: 2019-08-19 10:46 GMT

ಹೊಸದಿಲ್ಲಿ, ಆ.19: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ `ಮೇಕ್ ಇನ್ ಇಂಡಿಯಾ' ಯೋಜನೆ ತನ್ನ ಉದ್ದೇಶಿತ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸಲು ವಿಫಲವಾಗಿವೆ ಎಂದು ಹೇಳಿರುವ ಲಾರ್ಸೆನ್ ಆ್ಯಂಡ್ ಟೌಬ್ರೊ (ಎಲ್ & ಟಿ) ಕಂಪೆನಿಯ ಅಧ್ಯಕ್ಷ ಎ.ಎಂ. ನಾಯ್ಕ್, ಭಾರತೀಯ ಕಂಪೆನಿಗಳು ಸ್ಥಳೀಯವಾಗಿ ಉತ್ಪಾದಿಸುವ ಬದಲು ಅಗತ್ಯ ವಸ್ತುಗಳನ್ನು ಆಮದು ಮಾಡಲು ಹೆಚ್ಚಿನ ಆಸಕ್ತಿ ವಹಿಸಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸದ್ಯ ಸ್ಥಳೀಯ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಗಮನ ದೊರೆಯದೇ ಇರುವುದರಿಂದ ಹೆಚ್ಚಿನ ಉದ್ಯೋಗಗಳು ಭಾರತದಿಂದ ಹೊರಗೆ ರಫ್ತಾಗುತ್ತಿವೆ ಎಂದು ನಾಯ್ಕ್  ಹೇಳಿದ್ದಾರೆ.

ಭಾರತೀಯ ಕಂಪೆನಿಗಳಿಗೆ ಹಣಕಾಸಿನ ನೆರವು ಪಡೆಯಲು ಹೆಚ್ಚಿನ ಆಯ್ಕೆಗಳಿಲ್ಲ. ಆದರೆ ಆಮದಿಗೆ ಸಾಲ ಸೌಲಭ್ಯ ಲಭ್ಯವಿದೆ ಎಂದು ಅವರು ವಿವರಿಸಿದ್ದಾರೆ.

ಕುಶಲ ಕಾರ್ಮಿಕರ ಸಂಖ್ಯೆಗಳನ್ನು ಪರಿಗಣಿಸಿದಾಗ ಉತ್ಪಾದನಾ ಕ್ಷೇತ್ರ ಅಗತ್ಯ ಉದ್ಯೋಗಗಳನ್ನು ಸೃಷ್ಟಿಸಲು ವಿಫಲವಾಗಿದೆ  ಎಂದು  ಹೇಳಿದ ಅವರು, ಸರಕಾರ ಹೆಚ್ಚು ವಿದೇಶಿ ಹೂಡಿಕೆಗಳನ್ನು  ಆಕರ್ಷಿಸಿ ಇಲ್ಲಿ ಉದ್ಯಮಗಳಿಗೆ ಪೂರಕ ವಾತಾವರಣ ಸೃಷ್ಟಿಸಬೇಕು ಎಂದು ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News