ಸುಪ್ರೀಂಕೋರ್ಟ್‌ನಿಂದ ತಕ್ಷಣ ಪರಿಹಾರ ಕಂಡುಕೊಳ್ಳಲು ಚಿದಂಬರಂ ವಿಫಲ

Update: 2019-08-21 06:52 GMT

ಹೊಸದಿಲ್ಲಿ, ಆ.21: ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಬಂಧನದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಬುಧವಾರ ಸುಪ್ರೀಂಕೋರ್ಟ್ ನ್ಯಾಯಪೀಠದಿಂದ ತಕ್ಷಣ ಪರಿಹಾರ ಪಡೆಯಲು ವಿಫಲರಾಗಿದ್ದಾರೆ.

ಚಿದಂಬರಂ ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಾಧೀಶರ ಮುಂದೆ ಇಡುವುದಾಗಿ ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿದೆ.

  ಬಂಧನ ಭೀತಿಯಿಂದ ರಕ್ಷಣೆ ನೀಡುವಂತೆ ಚಿದಂಬರಂ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಜಸ್ಟಿಸ್‌ಗಳಾದ ಎನ್‌ವಿ ರಮಣ, ಎಂ.ಶಾಂತನಗೌಡರ್ ಹಾಗೂ ಅಜಯ್ ರಸ್ತೋಗಿ, ಈ ಪ್ರಕರಣವನ್ನು ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೊಯ್ ಮುಂದೆ ಇಡಲಾಗುವುದು ಎಂದಿದೆ.

‘‘ನಾನು ಇದನ್ನು ಮುಖ್ಯ ನ್ಯಾಯಾಧೀಶರಿಗೆ ಕಳುಹಿಸಿಕೊಡುತ್ತೇನೆ. ಅವರು ಆದೇಶ ನೀಡುತ್ತಾರೆ’’ ಎಂದು ಚಿದಂಬರಂ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಾಲ್‌ಗೆ ನ್ಯಾಯಪೀಠ ತಿಳಿಸಿದೆ.

ಸಿಬಿಐ ಹಾಗೂ ಇಡಿ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News