​ಮೊದಲ ರಫೇಲ್ ಯುದ್ಧ ವಿಮಾನ ಯಾವಾಗ ಬರಲಿದೆ ಗೊತ್ತೇ ?

Update: 2019-08-22 03:55 GMT

ಹೊಸದಿಲ್ಲಿ : ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಕಂಪನಿ ಜತೆ ಮಾಡಿಕೊಂಡ ಒಪ್ಪಂದದ ಅನ್ವಯ ಮೊದಲ ರಫೇಲ್ ಯುದ್ಧವಿಮಾನ ಸ್ವೀಕರಿಸುವ ಸಲುವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಏರ್‌ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಮುಂದಿನ ತಿಂಗಳು ಪ್ಯಾರೀಸ್‌ಗೆ ಭೇಟಿ ನೀಡಲಿದ್ದಾರೆ.

ಫ್ರಾನ್ಸ್‌ನ ಉನ್ನತ ಮಿಲಿಟರಿ ಅಧಿಕಾರಿಗಳು ಮತ್ತು ಡಸಾಲ್ಟ್ ಏವಿಯೇಷನ್‌ನ ಹಿರಿಯ ಅಧಿಕಾರಿಗಳು ಕೂಡಾ ಸೆ. 20ರಂದು ನಡೆಯುವ ಹಸ್ತಾಂತರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ ಗುರುವಾರ ಫ್ರಾನ್ಸ್‌ಗೆ ದ್ವಿಪಕ್ಷೀಯ ಭೇಟಿಗಾಗಿ ತೆರಳಲಿದ್ದು, ಉಭಯ ದೇಶಗಳ ನಡುವೆ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಬಗ್ಗೆಯೂ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ವಾಯುಪಡೆಯ ಉನ್ನತ ಅಧಿಕಾರಿಗಳ ತಂಡ ಈಗಾಗಲೇ ಪ್ಯಾರೀಸ್ ತಲುಪಿದ್ದು, ಹಸ್ತಾಂತರ ಬಗ್ಗೆ ಫ್ರಾನ್ಸ್ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ.

58 ಸಾವಿರ ಕೋಟಿ ರೂ. ಅಂದಾಜು ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿ ಮಾಡಲು 2016ರ ಸೆಪ್ಟೆಂಬರ್‌ನಲ್ಲಿ ಭಾರತ, ಅಂತರ ಸರ್ಕಾರ ಒಪ್ಪಂದಕ್ಕೆ ಸಹಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News