ಕಳೆದ 70 ವರ್ಷಗಳಲ್ಲಿ ಆರ್ಥಿಕ ವಲಯದಲ್ಲಿ ಇಂತಹ ಪರಿಸ್ಥಿತಿ ಎದುರಿಸಿಲ್ಲ: ನೀತಿ ಆಯೋಗ

Update: 2019-08-23 05:17 GMT
ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್

ಹೊಸದಿಲ್ಲಿ,ಆ.23: ದೇಶದ ಪ್ರಸ್ತುತ ಆರ್ಥಿಕ ಕುಸಿತ ಅಭೂತಪೂರ್ವ ಪರಿಸ್ಥಿತಿಯಾಗಿದೆ ಎಂದು ಬಣ್ಣಿಸಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ಇಡೀ ಆರ್ಥಿಕ ವಲಯ ಮಂಕಾಗಿದ್ದು, ಕಳೆದ 70 ವರ್ಷಗಳಲ್ಲಿ ನಾವು ಇಂತಹ ದ್ರವ್ಯತೆ ಪರಿಸ್ಥಿತಿಯನ್ನು ಎದುರಿಸಿಲ್ಲ ಎಂದರು.

ಕೇಂದ್ರ ಸರಕಾರವು ಖಾಸಗಿ ವಲಯದ ಆತಂಕವನ್ನು ಹೋಗಲಾಡಿಸಲು ಏನಾದರೂ ಮಾಡಲೇಬೇಕಾಗಿದೆ. ಹಣಕಾಸು ಕ್ಷೇತ್ರದಲ್ಲಿ ಸಮಸ್ಯೆಯಿದೆ ಎನ್ನುವುದನ್ನು ಸರಕಾರ ಗುರುತಿಸಿದೆ. ದ್ರವ್ಯತೆ ದಿವಾಳಿಯಾಗುತ್ತಿದೆ. ಆದ್ದರಿಂದ ನೀವು ಇದನ್ನು ತಡೆಯಬೇಕಾಗಿದೆ ಎಂದು ರಾಜೇಶ್ ಕುಮಾರ್ ಸಲಹೆ ನೀಡಿದ್ದಾರೆ.

ದೇಶದ ಆರ್ಥಿಕತೆಯು ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕೆಟ್ಟ ಬೆಳವಣಿಗೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಉನ್ನತ ಅರ್ಥಶಾಸ್ತ್ರಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ದ್ರವ್ಯತೆ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಕುಮಾರ್, ‘‘ಯಾರು ಕೂಡ ಯಾರೋಬ್ಬರ ಮೇಲೂ ಭರವಸೆ ಇಡುತ್ತಿಲ್ಲ್ಲ. ಇದು ಕೇವಲ ಸರಕಾರ ಹಾಗೂ ಖಾಸಗಿ ವಲಯದಲ್ಲಿ ಮಾತ್ರವಲ್ಲ, ಖಾಸಗಿ ವಲಯದೊಳಗೆ ಬೇರೆ ಯಾರಿಗೂ ಸಾಲ ನೀಡಲು ಯಾರೂ ಬಯಸುವುದಿಲ್ಲ’’ಎಂದು ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News