ದಿಲ್ಲಿ ದರ್ಬಾರ್‌ಗೆ ಬುಲ್ಸ್ ಕಂಗಾಲು

Update: 2019-08-24 18:32 GMT

ಹೊಸದಿಲ್ಲಿ, ಆ.24: ಆತಿಥೇಯ ದಿಲ್ಲಿ ದಬಾಂಗ್ ತಂಡ ಶನಿವಾರ ನಡೆದ ಪ್ರೊ ಕಬಡ್ಡಿ ಲೀಗ್‌ನ 56ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು 33-31 ಅಂಕಗಳ ಅಂತರದಿಂದ ಮಣಿಸಿ ಲೀಗ್‌ನಲ್ಲಿ ತನ್ನ ದರ್ಬಾರ್ ಮುಂದುವರಿಸಿದೆ.

 ತ್ಯಾಗರಾಜ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ದಿಲ್ಲಿ ಪರ ನವೀನ್‌ಕುಮಾರ್ 13 ಅಂಕಗಳಿಸಿ ತಂಡದ ಗೆಲುವಿನ ರೂವಾರಿಯಾದರು. ಪರಾಜಿತ ಬುಲ್ಸ್ ಪರ ಪವನ್ ಕುಮಾರ್ 17 ಅಂಕ ಗಳಿಸಿದರೂ ತಂಡ 2 ಅಂಕದಿಂದ ಸೋಲುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ದಿಲ್ಲಿ ತಾನಾಡಿದ 9 ನೇ ಪಂದ್ಯದಲ್ಲಿ 7ನೇ ಗೆಲುವು ದಾಖಲಿಸಿ ಒಟ್ಟು 36 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಬೆಂಗಳೂರು 10ನೇ ಪಂದ್ಯದಲ್ಲಿ 5ನೇ ಸೋಲು ಕಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News