ಜಮ್ಮು-ಕಾಶ್ಮೀರದಲ್ಲಿ ಔಷಧಿಗಳ ಕೊರತೆಯಿಲ್ಲ: ಸತ್ಯಪಾಲ್ ಮಲಿಕ್

Update: 2019-08-25 09:39 GMT

ಹೊಸದಿಲ್ಲಿ, ಆ.25: ಜಮ್ಮು-ಕಾಶ್ಮೀರದಲ್ಲಿ ಅಂಗಡಿಗಳು ಮುಚ್ಚಲ್ಪಟ್ಟ ಕಾರಣ ಔಷಧಿಗಳು ಹಾಗೂ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ ಎಂಬ ವರದಿಯನ್ನು ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಸಿಂಗ್ ರವಿವಾರ ನಿರಾಕರಿಸಿದ್ದಾರೆ.

‘‘ಕಾಶ್ಮೀರದಲ್ಲಿ ಅಗತ್ಯ ವಸ್ತುಗಳ ಹಾಗೂ ಔಷಧಿಗಳ ಕೊರತೆ ಉಂಟಾಗಿಲ್ಲ. ಈದ್ ದಿನ ನಾವು ಮಾಂಸ, ತರಕಾರಿಗಳು ಹಾಗೂ ಮೊಟ್ಟೆಗಳನ್ನು ಎಲ್ಲ ಜನರ ಮನೆಗೆ ಸರಬರಾಜು ಮಾಡಿದ್ದೆವು. 10ರಿಂದ 15 ದಿನಗಳಲ್ಲಿ ನಿಮ್ಮ ಅಭಿಪ್ರಾಯ ಬದಲಾಗಲಿದೆ’’ ಎಂದು ಅರುಣ್ ಜೇಟ್ಲಿಗೆ ಅಂತಿಮ ನಮನ ಸಲ್ಲಿಸಲು ದಿಲ್ಲಿಗೆ ಬಂದಿರುವ ಮಲಿಕ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ಇನ್ನೆಷ್ಟು ದಿನ ನಿರ್ಬಂಧ ಇರುತ್ತದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಲಿಕ್,‘‘ಸಂಪರ್ಕ ಮಾಧ್ಯಮಗಳ ಸ್ಥಗಿತದಿಂದ ಜೀವ ಉಳಿಸಲು ಸಾಧ್ಯವಾಗುವುದಾದರೆ, ಅದರಿಂದ ಹಾನಿ ಏನಿದೆ?.ಜನರ ಜೀವಕ್ಕೆ ಅಪಾಯವಾಗಬಾರದು ಎನ್ನುವುದು ನಮ್ಮ ಉದ್ದೇಶ. 10 ದಿನಗಳ ಕಾಲ ಫೋನ್ ಸಂಪರ್ಕ ಇರುವುದಿಲ್ಲ.ಆದರೆ, ಆದಷ್ಟು ಬೇಗನೆ ರಾಜ್ಯದಲ್ಲಿ ನಿರ್ಬಂಧವನ್ನು ತೆರವುಗೊಳಿಸಲಾಗುವುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News