ಕಲಬುರ್ಗಿಯಲ್ಲಿ ಆ.29ರಂದು ಮತ್ತೆ ಕಲ್ಯಾಣ ಅಭಿಯಾನ

Update: 2019-08-25 14:01 GMT

ಕಲಬುರ್ಗಿ, ಆ.25: ಶರಣ ಚಳವಳಿಯ ತಾತ್ವಿಕ ಭಿತ್ತಿಯೊಳಗಿನಿಂದ ಪರಿಹಾರಗಳನ್ನು ಹುಡುಕಿಕೊಳ್ಳುವ ನಿಟ್ಟಿನಲ್ಲಿ ಸಹಮತ ವೇದಿಕೆಯು ಆಯೋಜಿಸಿರುವ ಮತ್ತೆ ಕಲ್ಯಾಣ ಅಭಿಯಾನವು ಆ.29ರಂದು ಕಲಬುರ್ಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ನಡೆಯಲಿದೆ.

ರವಿವಾರ ನಗರದ ಬಸವಮಂಟಪದಲ್ಲಿ ರವಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸ್ವಾಗತ ಸಮಿತ ಅಧ್ಯಕ್ಷ ಶರಣು ಪಪ್ಪಾ ಅವರು, ಅಭಿಯಾನದ ನೇತೃತ್ವ ವಹಿಸಿರುವ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಜೇವರ್ಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಅದೇ ದಿನ ಸಂಜೆ 4ಕ್ಕೆ ಗಂಜ ನಗರೇಶ್ವರ ಶಾಲೆಯಿಂದ ಎಸ್.ಎಂ.ಪಂಡಿತ್ ರಂಗಮಂದಿರದವರೆಗೆ ಸಹ ಧರ್ಮೀಯರೊಂದಿಗೆ ಸಾಮರಸ್ಯದ ನಡಿಗೆ ಆಯೋಜಿಸಲಾಗಿದೆ. ಡಿಸಿಪಿ(ಕಾನೂನು ಮತ್ತು ಸುವ್ಯವಸ್ಥೆ) ಡಿ.ಕಿಶೋರಬಾಬು ಅವರು ಚಾಲನೆ ನೀಡಲಿದ್ದಾರೆ ಎಂದರು.

ಅಣದೂರು ಬುದ್ಧವಿವಾಹರ ಭಂತೇಜಿ ವರಜ್ಯೋತಿ, ಐವಾನ್ ಇ ಶಾಹಿ ಮಸೀದಿಯ ಇಮಾಮ್, ದಲಿತ ಸಂಘರ್ಷ ಸಮಿತಿಯ ಅರ್ಜುನ್ ಭದ್ರತೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ್ ಕಿಣ್ಣೆ, ಆರ್ಯವೈಶ್ಯ ಸಮುದಾಯದ ರವೀಂದ್ರ ಮುಕ್ಕಾ, ಜೈನ ಸಮುದಾಯದ ನಾಗನಾಥ ಚಿಂದೆ ಸಾಮರಸ್ಯದ ನಡಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಂಜೆ 6ಕ್ಕೆ ರಂಗಮಂದಿರದಲ್ಲಿ ಮತ್ತೆ ಕಲ್ಯಾಣ ಸಾರ್ವಜನಿಕ ಸಮಾವೇಶ ನೆರವೇರಲಿದೆ ಎಂದರು.

ಈ ಸಂದರ್ಭದಲ್ಲಿ ಸಾರಂಗಮಠ ಶ್ರೀಶೈಲ, ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News