400 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ವಶ

Update: 2019-08-25 16:50 GMT

ಥೌಬಾಲ್, ಆ. 25: ಫೌದೆಲ್ ಕೈರಂಬಿ ಮಥಾಕ್ ಲೈಕೈಯ ಇಂಟರ್ ವಿಲೇಜ್ ರಸ್ತೆಯಲ್ಲಿ ದಾಳಿ ನಡೆಸಿರುವ ಪೊಲೀಸರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 400 ಕೋಟಿ ರೂಪಾಯಿ ಬೆಲೆ ಬಾಳುವ 40 ಲಕ್ಷ ಮಾದಕ ದ್ರವ್ಯ ಡಬ್ಲ್ಯುವೈ (ವರ್ಲ್ಡ್ ಈಸ್ ಯುವರ್) ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಥೌಬಾಲ್ ಜಿಲ್ಲಾ ಪೊಲೀಸ್ ಸ್ಥಳೀಯ ಯುವಕರ ಸಂಘಟನೆ ಹಾಗೂ ಮಹಿಳಾ ಕಲ್ಯಾಣ ಸಂಘಟನೆಯ ನೆರವಿನೊಂದಿಗೆ ಈ ನಿಷೇಧಿಕ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿತು ಎಂದು ಎಸ್‌ಪಿ ಡಾ. ಇಬೊಮ್ಚಾ ಸಿಂಗ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ 24ರಂದು ಇಂಟರ್ ವಿಲೇಜ್ ರಸ್ತೆಯಲ್ಲಿ ವಾಹನವೊಂದು ಅನುಮಾನಾಸ್ಪದವಾಗಿ ಸಂಚರಿಸುವುದು ಕಂಡು ಬಂತು. ಕೂಡಲೇ ತಡೆ ಹಿಡಿದು ಪರಿಶೀಲಿಸಿದಾಗ ನಿಷೇಧಿತ ಮಾದಕ ದ್ರವ್ಯ ಪತ್ತೆಯಾಯಿತು ಎಂದು ಅವರು ತಿಳಿಸಿದ್ದಾರೆ. 40 ಲಕ್ಷ  ಡಬ್ಲ್ಯುವೈ ಮಾತ್ರೆಗಳನ್ನು ಕಾರ್ಪೆಟ್ ರೋಲ್‌ನಲ್ಲಿ ಇರಿಸಲಾಗಿತ್ತು. ಈ ಡಬ್ಲು ವೈ ಮಾತ್ರೆಯ ಬೆಲೆ ಅಂದಾಜು ಸುಮಾರು 400 ಕೋಟಿ ರೂಪಾಯಿ ಎಂದು ಇಂಫಾಲದ ಕಸ್ಟಮ್ಸ್ ವಿಭಾಗದ ಅಕ್ರಮ್ಳ ಸಾಗಾಟ ತಡೆ ಘಟಕ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News