ಕಾಶ್ಮೀರದಲ್ಲಿ ವಿಪಕ್ಷ ಮತ್ತು ಮಾಧ್ಯಮ ‘ಕ್ರೂರ ಆಡಳಿತ’ದ ರುಚಿ ನೋಡಿದೆ: ರಾಹುಲ್ ಗಾಂಧಿ

Update: 2019-08-25 17:03 GMT

ಹೊಸದಿಲ್ಲಿ, ಆ. 25: ಶ್ರೀನಗರ ಭೇಟಿಗೆ ನಿರಾಕರಿಸಿದ ದಿನಗಳ ಬಳಿಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪ್ರತಿಪಕ್ಷದ ನಾಯಕರು ಹಾಗೂ ಮಾಧ್ಯಮ ‘ಕರಾಳ ಆಡಳಿತ’ ಹಾಗೂ ‘ಬರ್ಬರ ಶಕ್ತಿ’ಯ ರುಚಿ ನೋಡಿದ್ದಾರೆ ಎಂದಿದ್ದಾರೆ.

‘‘ಜಮ್ಮು ಹಾಗೂ ಕಾಶ್ಮೀರದ ಜನರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು 20 ದಿನಗಳು ಕಳೆದವು. ನಾವು ನಿನ್ನೆ ಶ್ರೀನಗರಕ್ಕೆ ಭೇಟಿ ನೀಡಲು ಯತ್ನಿಸಿದ ಸಂದರ್ಭ ಜಮ್ಮು ಹಾಗೂ ಕಾಶ್ಮೀರ ಜನರ ಮೇಲಿನ ಕರಾಳ ಆಡಳಿತ ಹಾಗೂ ಬರ್ಬರ ಶಕ್ತಿಯ ರುಚಿಯನ್ನು ಪ್ರತಿಪಕ್ಷದ ನಾಯಕರು ಹಾಗೂ ಮಾದ್ಯಮ ಅನುಭವಿಸಿತು’’ ಎಂದು ಅವರು ವೀಡಿಯೊದೊಂದಿಗೆ ಟ್ವೀಟ್ ಮಾಡಿದ್ದಾರೆ.

ವೀಡಿಯೊದಲ್ಲಿ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರ ಆಹ್ವಾನದ ಮೇರೆಗೆ ನಿಯೋಗ ಆಗಮಿಸಿದೆ ಎಂಬುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಲು ರಾಹುಲ್ ಗಾಂಧಿ ವಿಫಲ ಯತ್ನ ನಡೆಸುತ್ತಿರುವುದು ದಾಖಲಾಗಿದೆ. ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಅಲ್ಲಿನ ಪರಿಸ್ಥಿತಿ ಪರಿಶೀಲಿಸಲು ಕಾಶ್ಮೀರ ಕಣಿವೆಗೆ ಭೇಟಿ ನೀಡಲು ಬಯಸಿದ್ದ ರಾಹುಲ್ ಗಾಂಧಿ ಒಳಗೊಂಡ ಪ್ರತಿಪಕ್ಷಗಳ ನಾಯಕರ ನಿಯೋಗಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ರಾಜ್ಯಾಡಳಿತ ತಡೆ ಒಡ್ಡಿತ್ತು. ಅಲ್ಲದೆ, ಅವರನ್ನು ಹೊಸದಿಲ್ಲಿಗೆ ಹಿಂದೆ ಕಳುಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News