ಪ್ರಳಯ ಪೀಡಿತ ನಿರಾಶ್ರಿತರಿಗೆ ಎಸ್‌ವೈಎಸ್, ಎಸ್ಸೆಸ್ಸೆಫ್, ಕೆಸಿಎಫ್ ನಿಂದ ನೆರವು

Update: 2019-08-25 17:11 GMT

ಪುತ್ತೂರು, ಆ.25: ಭೀಕರ ಪ್ರವಾಹಕ್ಕೆ ತುತ್ತಾಗಿ ಸಂಕಷ್ಟಕ್ಕೀಡಾಗಿರುವ ಕೊಡಗಿನ ನಿರಾಶ್ರಿತರಿಗೆ ಪುತ್ತೂರು ಎಸ್.ವೈ.ಎಸ್, ಎಸ್ಸೆಸ್ಸೆಫ್, ಟೀಂ ಇಸಾಬದ ವತಿಯಿಂದ ಮೂರನೇ ಹಂತದಲ್ಲಿ ಐದು ಲಕ್ಷಕ್ಕೂ ಅಧಿಕ ಮೌಲ್ಯದ ಬೆಡ್, ಬೆಡ್ ಶೀಟ್, ತಲೆ ದಿಂಬು, ಆಹಾರ ಸಾಮಾಗ್ರಿಗಳನ್ನು ತಲುಪಿಸಲಾಯಿತು.

ಆ.22 ರಂದು ಪುತ್ತೂರಿನ ಸುನ್ನೀ ಸೆಂಟರ್ ನಿಂದ ಎಸ್ಸೆಸ್ಸೆಫ್ ರಾಜ್ಯ ನಾಯಕರ ನೇತೃತ್ವದಲ್ಲಿ ಹೊರಟ ತಂಡವು ಕೊಡಗು ಜಿಲ್ಲೆಯ ಪ್ರವಾಹದಿಂದ ಅಧಿಕ ನಷ್ಟಗಳನ್ನು ಅನುಭವಿಸಿದ ಪ್ರದೇಶಗಳಾದ ಬೆಳೆಮಣೆ, ಕೊಟ್ಟಮುಡಿ, ಸಿದ್ದಾಪುರ ತಾಲೂಕಿನ ಗುಹ್ಯ, ನೆಲ್ಯಹುದಿಕೇರಿ ಪ್ರದೇಶಗಳಲ್ಲಿ ಉಮರ್ ಸಖಾಫಿ ಎಡಪ್ಪಾಲರ ಸಮ್ಮುಖದಲ್ಲಿ ನಿರಾಶ್ರಿತರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಅಸ್ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಲ್ ಸುಪ್ಯಾನ್ ಸಖಾಫಿ, ಕಾರ್ಯದರ್ಶಿ ಯಾಕೂಬ್ ಸಅದಿ ನಾವೂರು, ಕೋಶಾಧಿಕಾರಿ ರವೂಪ್ ಖಾನ್, ಶಾಫಿ ಸಅದಿ ಮೆಜೆಸ್ಟಿಕ್, ಕೆ.ಸಿ.ಎಫ್ ನಾಯಕ ಹಸೈನಾರ್ ಅಮಾನಿ ಅಜ್ಜಾವರ, ಅಡ್ವೊಕೇಟ್ ಶಾಕಿರ್ ಹಾಜಿ, ಕೊಂಬಾಳಿ ಹನೀಫ್ ಝುಹ್ರಿ, ರಝಾಕ್ ಖಾಸಿಮಿ ಕೂರ್ನಡ್ಕ, ಎಸ್.ವೈ.ಎಸ್ ಟೀಂ ಇಸಾಬ ಝೋನ್ ಅಮೀರ್ ಇಕ್ಬಾಲ್ ಬಪ್ಪಳಿಗೆ, ಎಸ್.ವೈ.ಎಸ್ ಸೆಂಟರ್ ಪ್ರ.ಕಾರ್ಯದರ್ಶಿ ಸ್ವಾಲಿಹ್ ಮುರ, ಕೆ.ಸಿ.ಎಫ್ ನಾಯಕ ಇಬ್ರಾಹಿಂ ಬಪ್ಪಳಿಗೆ, ಆದಂ ಹಾಜಿ ಪಡೀಲ್, ಶಾಹುಲ್ ಹಮೀದ್ ಕಬಕ , ಸಿದ್ದೀಕ್ ಹಾಜಿ ಕಬಕ, ಎಸ್ಸೆಸ್ಸೆಫ್ ಡಿವಿಶನ್ ಅಧ್ಯಕ್ಷ ಝುಬೈರ್ ಸಖಾಫಿ ಗಟ್ಟಮನೆ, ಪ್ರ.ಕಾರ್ಯದರ್ಶಿ ಶಫೀಕ್ ಮಾಸ್ಟರ್, ಹಾರೀಸ್ ಅಡ್ಕ ಸಹಿತ ಹಲವು ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News