ಮೈಸೂರು ಪ್ರಮುಖ ಸ್ಟಾರ್ಟ್ ಅಪ್ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ: ಡಾ.ಇ.ವಿ.ರಮಣ ರೆಡ್ಡಿ

Update: 2019-08-28 18:19 GMT

ಮೈಸೂರು,ಆ.28: ದೇಶದಲ್ಲಿ ಪ್ರಮುಖ ಸ್ಟಾರ್ಟ್ ಅಪ್ ಕೇಂದ್ರವಾಗುವ ಸಾಮರ್ಥ್ಯವನ್ನು ಮೈಸೂರು ಹೊಂದಿದೆ ಎಂದು ಐಟಿ, ಬಿಟಿ ಮತ್ತು ಎಸ್ ಮತ್ತು ಟಿ ಇಲಾಖೆ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಮೈಸೂರು ಪ್ರದೇಶವನ್ನು ಮುಂದಿನ ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಜೈವಿಕ ತಂತ್ರಜ್ಞಾನ ಗುರಿಯಾಗಿಸುವಲ್ಲಿ ಚಾಲನೆ ನೀಡುವ ಪ್ರಯತ್ನವಾಗಿ ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆ ಬೆಂಗಳೂರು ಟೆಕ್ ಸಮಿಟ್-2019 “ಮೈಸೂರು ದಿ ನೆಕ್ಸ್ಟ್ ಇನ್ನೋವೇಷನ್ ಹಬ್’’ ಎಂಬ ತಿರುಳಿನಡಿ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಪ್ರಮುಖ ಸ್ಟಾರ್ಟ್ಅಪ್ ಕೇಂದ್ರವಾಗುವ ಸಾಮರ್ಥ್ಯವನ್ನು ಮೈಸೂರು ಹೊಂದಿದೆ. ಬೆಂಗಳೂರಿನ ನಂತರದ ಆಧ್ಯತೆಯ ಗುರಿಯಾಗಿರುವುದಲ್ಲದೆ, ಬದುಕಿನ ಗುಣಮಟ್ಟ ಮತ್ತು ವೆಚ್ಚದಲ್ಲಿ ಉತ್ತಮ ಸ್ಥಾನ ಹೊಂದಿದೆ. ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು, ಮೂಲಸೌಕರ್ಯ, ಸಂಪರ್ಕ ಮತ್ತು ವಲಸಿಗ ಸಮುದಾಯಗಳೊಂದಿಗೆ ಉತ್ತಮ ಸಂಪರ್ಕ ಪೂರೈಸುತ್ತದೆ. ಎಲಿವೇಟ್ 2019 ಕಾರ್ಯಕ್ರಮದಲ್ಲಿ ಮೈಸೂರಿನ ಎರಡು ಸ್ಟಾರ್ಟ್ ಅಪ್ ಗಳು ಫೈನಲ್ ತಲುಪಿದ್ದವು ಎಂಬುದು ಈ ನಗರ ಸ್ಟಾರ್ಟ್ ಅಪ್ ಕೇಂದ್ರವಾಗುವ ಕಡೆಗೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ ಎನ್ನುವುದನ್ನು ಸೂಚಿಸುತ್ತದೆ. ನ್ಯೂ ಏಜ್ ಇನ್ನೋವೇಷನ್ ನೆಟ್ವರ್ಕ್(ಎನ್ಎಐಎನ್) ಮೂಲಕ ಕೈಗೊಳ್ಳುವ ವಿಶ್ವವಿದ್ಯಾಲಯಗಳನ್ನು ತೊಡಗಿಸುವ ಕಾರ್ಯದ ಕಡೆಗೆ ಸರ್ಕಾರ ದೃಢವಾಗಿ ಒತ್ತು ನೀಡಿದೆ. ಇದರಲ್ಲಿ ರಾಜ್ಯದ 2ನೇ ಮತ್ತು 3ನೇ ಹಂತದ ನಗರಗಳ ಕಡೆಗೆ ಗಮನಹರಿಸಲಾಗಿದೆ. 30 ಇಂಜಿನಿಯರಿಂಗ್ ಸಂಸ್ಥೆಗಳ ಜಾಲದ ಮೂಲಕ 293 ಯೋಜನೆಗಳಿಗೆ ನಿಧಿ ನೆರವು ನೀಡಲಾಗಿದ್ದು, ನೂರಕ್ಕೂ ಹೆಚ್ಚಿನ ಕೆಲಸ ಮಾಡುವಂತಹ ಮೂಲ ಮಾದರಿಗಳನ್ನು ತಯಾರಿಸಲಾಗಿದೆ. ಮೈಸೂರಿನ ನಾಲ್ಕು ಕಾಲೇಜುಗಳಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್(ಎನ್ಐಇ), ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್(ಎಸ್ಜೆಸಿಇ), ಎಸ್ಬಿಆರ್ಆರ್ ಮಹಾಜನ ಫಸ್ಟ್ ಗ್ರೇಡ್ ಕಾಲೇಜ್ ಮತ್ತು ವಿದ್ಯಾವಿಕಾಸ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜೀಸ್ ಗಳಲ್ಲಿ ಇಂತಹ ಇನ್ ಕ್ಯೂಬೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಉದ್ಯಮಶೀಲತೆ ಮತ್ತು ನವೀನತಾ ಕಾರ್ಯವನ್ನು ಪ್ರೋತ್ಸಾಹಿಸಲಿವೆ  ಎಂದರು.

ಮೈಸೂರಿನಿಂದ ಸುಮಾರು 6000 ಕೋಟಿ ರೂ.ಗಳ ಮಾಹಿತಿ ತಂತ್ರಜ್ಞಾನ ರಫ್ತು ನಡೆಯುತ್ತಿದ್ದು, ಇಲಾಖೆ ಎನ್ಎಐಎನ್ ಉಪಕ್ರಮವನ್ನು ದೃಢಪಡಿಸಲು ಮುಂದಾಗಿದೆ, ಈಗ ಅದನ್ನು ಜಿಲ್ಲಾ ನವೀನತಾ ಕೇಂದ್ರ(ಡಿಸ್ಟ್ರಿಕ್ ಇನ್ನೋವೇಷನ್ ಹಬ್ಸ್)ಗಳಾಗಿಸಲಾಗುತ್ತಿದೆ. ಇವುಗಳನ್ನು ಕೆ-ಟೆಕ್ ಡಿಸ್ಟ್ರಿಕ್ಟ್ ಇನ್ನೋವೇಷನ್ ಅಸೋಸಿಯೇಟ್ಸ್(ಕೆ-ಡಿಐಎಎಸ್) ಎಂದು ಪುನರ್ ನಾಮಕರಣ ಮಾಡಲಾಗುವುದು. ಜಿಲ್ಲಾಮಟ್ಟದಲ್ಲಿ ನವೀನತಾ ಸಂಬಂಧಿ ಕಾರ್ಯಕ್ರಮಗಳಿಗೆ ಇದು ಬೆಂಬಲ ನೀಡಲಿದೆ.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತಹ ಅಧಿವೇಶನಗಳು, ಇಂಟರ್ನ್ ಶಿಪ್ ಗಳು ಮತ್ತು ಬೃಹತ್ ಕಂಪನಿಗಳು ಅಥವಾ ಇನ್ಕ್ಯೂಬೇಟರ್ಗಳಿಗೆ ಭೇಟಿಗಳು ಮುಂತಾದವುಗಳನ್ನು ಕೆ-ಡಿಯಾಗಳು ಆಯೋಜಿಸಲಿವೆ. ಇಲ್ಲಿ ಹೆಚ್ಚು ದೊಡ್ಡದಾದ ವ್ಯವಸ್ಥೆಗೆ ವಿದ್ಯಾರ್ಥಿಗಳು ತೆರೆದುಕೊಳ್ಳಬಹುದಾಗಿದೆ. ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡಗಳಂತಹ ನಗರಗಳಲ್ಲಿ ಬಿಟಿಎಸ್ನಂತಹ ಕಾರ್ಯಕ್ರಮಗಳನ್ನು ನಡೆಸಲು ನಾವು ಯೋಜಿಸುತ್ತಿದ್ದೇವೆ’’ ಎಂದು ಡಾ. ರಮಣಾರೆಡ್ಡಿ ಹೇಳಿದರು.

ಸರ್ಕಾರದ ಪ್ರಮುಖ ಕಾರ್ಯಕ್ರಮ ಕುರಿತು ವಿವರಿಸಿದ ಡಾ. ರಮಣಾರೆಡ್ಡಿ “ಕಳೆದ 21 ವರ್ಷಗಳಲ್ಲಿ ಬೆಂಗಳೂರು ಟೆಕ್ ಸಮಿಟ್ ತಂತ್ರಜ್ಞಾನ ಮತ್ತು ನವೀನತೆಗೆ ಜಾಗತಿಕವಾಗಿ ವೇಗ ಹೆಚ್ಚಿಸುವ ಕಾರ್ಯಕ್ರಮವಾಗಿದೆ. ಈ ವರ್ಷ ನಾವು ಬೆಂಗಳೂರು ಟೆಕ್ ಸಮಿಟ್ 2019ರ 22ನೇ ಆವೃತ್ತಿಯೊಂದಿಗೆ  ಹೆಚ್ಚು ದೊಡ್ಡದಾದ ಮತ್ತು ಉತ್ತಮವಾದ ತಂತ್ರಜ್ಞಾನಗಳನ್ನು ಕರ್ನಾಟಕಕ್ಕೆ “ಇನ್ನೋವೇಷನ್ ಅಂಡ್ ಇಂಪ್ಯಾಕ್ಟ್ 2.0’’ ಎಂಬ ತಿರುಳಿನಡಿ ತರುತ್ತಿದ್ದೇವೆ. ಕಳೆದ ವರ್ಷ ಬಿಟಿಎಸ್ ನಲ್ಲಿ ಒಟ್ಟಾರೆಯಾಗಿ 9 ಜಿಐಎ ನೇತೃತ್ವದ ಅಧಿವೇಶನಗಳು ಇದ್ದವು. ಆಸ್ಟ್ರೇಲಿಯಾ ಮತ್ತು ಫಿನ್ಲೆಂಡ್ ಗಳ ಸಚಿವರ ನಿಯೋಗ ಹಾಗೂ ಫ್ರಾನ್ಸ್ ಮತ್ತು ಎಸ್ಟೋನಿಯಾದ ರಾಯಭಾರಿಗಳು ಆಗಮಿಸಿದ್ದರು. ಬಿಟಿಎಸ್ 2019ಕ್ಕಾಗಿ ನಾವು ಫ್ರಾನ್ಸ್, ನೆದರ್ಲೆಂಡ್ಸ್, ಫಿನ್ಲೆಂಡ್, ಆಸ್ಟ್ರೇಲಿಯಾ, ಕೆನಡಾ ಮುಂತಾದ ದೇಶಗಳಿಂದ ಭಾಗವಹಿಸುವ ದೃಢೀಕರಣವನ್ನು ಸ್ವೀಕರಿಸಿದ್ದೇವೆ ಎಂದರು.

ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು, ಕೆಐಟಿಎಸ್ ವಿಭಾಗದ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, “ನವೀನತೆಯ ಮೂಲಕ ಕರ್ನಾಟಕದ ಆರ್ಥಿಕ ಸ್ಥಿತಿಯನ್ನು ಪರಿವರ್ತಿಸುವುದು ನಮ್ಮ ದೃಷ್ಟಿಕೋನವಾಗಿದ್ದು, ನವೀನತೆಯೆಡೆಗೆ ಬಿಟಿಎಸ್ ಗಮನ ಕೇಂದ್ರೀಕರಿಸಿದೆ. ಬೆಂಗಳೂರು ಟೆಕ್ ಸಮಿಟ್ 2019ರಲ್ಲಿ ಗಣ್ಯ ವ್ಯಕ್ತಿಗಳು ಚಿಂತನಾ ನಾಯಕತ್ವ ಕುರಿತು ಉಪನ್ಯಾಸ, ಚರ್ಚೆ ನಡೆಸಲಿದ್ದಾರೆ. ನವೀನತೆಯ ಹರಿಕಾರರು ಮಾರ್ಗಭಂಜಕ ಚಿಂತನೆಗಳನ್ನು ಸಾದರಪಡಿಸಲಿದ್ದಾರೆ. ಪರಿಣತ ಉಪನ್ಯಾಸಕಾರರು ಇತ್ತೀಚಿನ ಕೈಗಾರಿಕಾ ಒಲವುಗಳು ಮತ್ತು ಭವಿಷ್ಯದ ಅವಕಾಶಗಳ ಒಳನೋಟವನ್ನು ನೀಡಲಿದ್ದಾರೆ. ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಸ್ಟಾರ್ಟ್ಅಪ್ ಕೇಂದ್ರವಾಗಿರುವುದರಿಂದ ಬಿಟಿಎಸ್ನಲ್ಲಿ ಮೈಸೂರಿನಿಂದ ಉತ್ತಮ ಪ್ರಮಾಣದ ಭಾಗವಹಿಸುವಿಕೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ’’ ಎಂದರು.

ಬೆಂಗಳೂರು ಟೆಕ್ ಸಮಿಟ್ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 18 ಮತ್ತು 20, 2019ರ ನಡುವೆ ನಡೆಯಲಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆಯ ನಿರ್ದೇಶಕರಾದ   ಪ್ರಶಾಂತ್ ಕುಮಾರ್,  ಮೈಸೂರಿನ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ , ಎಸ್ಟಿಪಿಐನ ಹೆಚ್ಚುವರಿ ನಿರ್ದೇಶಕರು ಮತ್ತು ಪ್ರಭಾರ ಅಧಿಕಾರಿ ಜಯಪ್ರಕಾಶ್, ಸಿಲಿಕಾನ್ ರೋಡ್ನ ಸ್ಥಾಪಕರು ಮತ್ತು ವ್ಯವಸ್ಥಾಪಕ ಪಾಲುದಾರರಾದ ಸಿಡ್ ಮೂಕರ್ಜಿ, ಸಿಐಐ ಮೈಸೂರು ವಲಯದ ಚೇರ್ಮನ್ ಭಾಸ್ಕರ್ ಕಳಲೆ ಮತ್ತು ಸಿಎಫ್ಟಿಆರ್ಐನ ನಿರ್ದೇಶಕರಾದ ಡಾ. ಕೆ.ಎಸ್. ಎಂಎಸ್ ರಾಘವರಾವ್ ಅವರು ಹಾಜರಿದ್ದರು.

ಈ ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಪರಿಣತರು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಟೆಕ್ನೊರ್ಕ್ಯಾಟ್ಗಳು, ಶೈಕ್ಷಣಿಕ ತಜ್ಞರು, ಕೈಗಾರಿಕಾ ಸಂಸ್ಥೆಗಳು ಮತ್ತು ಕರ್ನಾಟಕದ ಎಲ್ಲೆಡೆಯ ನೀತಿ ರೂಪಿಸುವವರು ಭಾಗವಹಿಸಿದ್ದು, ಮೈಸೂರನ್ನು ಮುಂದಿನ ನವೀನತಾ ಕೇಂದ್ರವಾಗಿಸುವುದನ್ನು ಕುರಿತು ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News