ಗಡಿ ನಿಯಂತ್ರಣ ರೇಖೆ ಸಮೀಪ 2000 ಸೈನಿಕರ ಸೇನಾ ತುಕಡಿಗಳನ್ನು ನಿಯೋಜಿಸಿದ ಪಾಕ್: ವರದಿ

Update: 2019-09-05 11:19 GMT

ಹೊಸದಿಲ್ಲಿ, ಸೆ.5: ಕಾಶ್ಮೀರ ವಿಚಾರದಲ್ಲಿ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಮುಂದುವರಿದಿರುವಂತೆಯೇ ಪಾಕಿಸ್ತಾನವು ಪಾಕ್ ಆಕ್ರಮಿತ ಕಾಶ್ಮೀರದ ಬಾಘ್ ಹಾಗೂ ಕೋಟ್ಲಿ ಸೆಕ್ಟರ್ ನಲ್ಲಿ ಗಡಿ ನಿಯಂತ್ರಣ ರೇಖೆಯ ಸಮೀಪ ಸುಮಾರು 2,000 ಸೈನಿಕರ ಸೇನಾ ತುಕಡಿಗಳನ್ನು ನಿಯೋಜಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಗಡಿ ನಿಯಂತ್ರಣ ರೇಖೆಗಿಂತ ಸುಮಾರು 30 ಕಿಮೀ ದೂರದಲ್ಲಿ ಸದ್ಯ ಈ ತುಕಡಿಗಳನ್ನುನಿಯೋಜಿಸಲಾಗಿದ್ದು, ಭಾರತೀಯ ಸೇನೆ ಈ  ತುಕಡಿಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ ಸದ್ಯ ನಿಯೋಜಿಸಿರುವ ಸೇನಾ ತುಕಡಿಗಳು ಒಂದು ಬ್ರಿಗೇಡ್ ಗಾತ್ರದಷ್ಟಿದೆ ಎಂದೂ ಹೇಳಲಾಗಿದೆ. ಪಾಕಿಸ್ತಾನದಲ್ಲಿ ನೆಲೆ ನಿಂತಿರುವ ಲಷ್ಕರ್-ಎ-ತೊಯ್ಬಾ ಹಾಗೂ ಜೈಶ್-ಇ-ಮಹಮ್ಮದ್ ಸಂಘಟನೆಗಳು ಈಗಾಗಲೇ ಸ್ಥಳೀಯರನ್ನು ಹಾಗೂ ಅಫ್ಘಾನ್ ನಾಗರಿಕರನ್ನು ದೊಡ್ಡ ಮಟ್ಟದಲ್ಲಿ ಸೇರಿಸುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News