ಕೋಲಾರ: ಜಿಲ್ಲಾಮಟ್ಟದ 18 ಉತ್ತಮ ಶಿಕ್ಷಕರಿಗೆ ಸನ್ಮಾನ

Update: 2019-09-05 18:49 GMT

ಕೋಲಾರ, ಸೆ.5: ಶಿಕ್ಷಕರ ದಿನಾಚರಣೆ ಅಂಗವಾಗಿ ಈ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ  ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಯ್ಕೆಯಾಗಿದ್ದ 18 ಮಂದಿ ಶಿಕ್ಷಕರನ್ನು ಸಂಸದ ಎಸ್.ಮುನಿಸ್ವಾಮಿ ಶಾಸಕ ಕೆ.ಶ್ರೀನಿವಾಸಗೌಡ, ಡಿಸಿ ಜೆ.ಮಂಜುನಾಥ್ ಸನ್ಮಾನಿಸಿದರು.

ಪ್ರೌಢಶಾಲೆಗಳಿಂದ 6 ಶಿಕ್ಷಕರ ಆಯ್ಕೆ

ಪ್ರೌಢಶಾಲಾ ವಿಭಾಗದಿಂದ ಬಂಗಾರಪೇಟೆ ತಾಲೂಕು ಬಲಮಂದೆಯ ಸಹಶಿಕ್ಷಕ ನಂಜುಂಡಪ್ಪ, ಕೆಜಿಎಫ್ ಸೆಂಟ್ ಮೆರೀಸ್ ಅನುದಾನಿತ ಶಾಲೆಯ ಎಂ.ಮನೋಗರನ್, ಕೋಲಾರ ತಾಲೂಕು ಸೂಲೂರು ಸರ್ಕಾರಿ ಪ್ರೌಢಶಾಲೆಯ ರಾಜಣ್ಣ, ಮಾಲೂರು ಸರ್ಕಾರಿ ಬಾಲಕರ ಪಿಯು ಕಾಲೇಜಿನ ಮೇರಿ ಸುಮತಿ, ಮುಳಬಾಗಿಲು ತಾಲೂಕು ಉತ್ತನೂರಿನ ಎಂ.ವಿ.ಕೃಷ್ಣಪ್ಪ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಎ.ಮಂಜುನಾಥ್, ಶ್ರೀನಿವಾಸಪುರ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕೆ.ವಿ.ಶಾರದಮ್ಮರನ್ನು ಸನ್ಮಾನಿಸಲಾಯಿತು.

ಹಿರಿಯ ಪ್ರಾಥಮಿಕ ಶಾಲೆ: ಆರು ಶಿಕ್ಷಕರ ಆಯ್ಕೆ
ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಗಳಿಂದ ಜಿಲ್ಲಾ ಮಟ್ಟದ ಪ್ರಶಸ್ತಿಗಾಗಿ ಆರು ಮಂದಿ ಶಿಕ್ಷಕರನ್ನು ಆಯ್ಕೆ ಮಾಡಿದ್ದು, ಬಂಗಾರಪೇಟೆ ತಾಲೂಕಿನ ಎನ್‍ಟಿಜಿಎಂ ಹಿರಿಯ ಪ್ರಾಥಮಿಕ ಶಾಲೆಯ ಸುಜಾತಾ, ಕೆಜಿಎಫ್ ಬಿಇಎಂಎಲ್ ನಗರದ ಮಾದರಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಆರ್.ವೀಣಾ, ಕೋಲಾರ ತಾಲೂಕು ವೇಮಗಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಆರ್.ಸದಾನಂದ, ಮಾಲೂರು ತಾಲೂಕು ದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ.ಮಂಜುನಾಥ್, ಮುಳಬಾಗಿಲು ತಾಲೂಕು ನೇತಾಜಿ ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸರೋಜಮ್ಮ, ಶ್ರೀನಿವಾಸಪುರ ತಾಲೂಕು ಅಡ್ಡಗಲ್  ಹಿರಿಯ ಪ್ರಾಥಮಿಕ ಶಾಲೆಯ ಪ್ರಮೀಳಾರನ್ನು ಸನ್ಮಾನಿಸಲಾಯಿತು.

ಕಿರಿಯ ಪ್ರಾಥಮಿಕದಿಂದ ಆರು ಮಂದಿ ಆಯ್ಕೆ
ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಆರು ಮಂದಿ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಬಂಗಾರಪೇಟೆ ತಾಲೂಕು ದೊಡ್ಡ ಅಂಕಂಡಹಳ್ಳಿಯ ಶಿಕ್ಷಕ ಎಂ.ಕೃಷ್ಣಪ್ಪ, ಕೆಜಿಎಫ್ ತಾಲೂಕಿನ ತಮ್ಮೇನಹಳ್ಳಿಯ ರುಕ್ಮಿಣಿಯಮ್ಮ, ಕೋಲಾರ ತಾಲೂಕು ಮತ್ತಿಕುಂಟೆಯ ಎಂ.ನಾರಾಯಣಸ್ವಾಮಿ, ಮಾಲೂರು ತಾಲೂಕು ಚೂಡಗೊಂಡನಹಳ್ಳಿ ಶಾಲೆಯ ಶಿಕ್ಷಕ ಎನ್.ರಾಜಣ್ಣ, ಮುಳಬಾಗಿಲು ತಾಲೂಕು ಇಂದಿರಾ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಜಿ.ರಾಜಶೇಖರ್, ಶ್ರೀನಿವಾಸಪುರದ ಸರ್ಕಾರಿ ಮಾದರಿ ಹಿರಿಯ ಮಾಧ್ಯಮಿಕ ಶಾಲೆಯ ಎಸ್.ಆರ್.ನಾರಯಣಸ್ವಾಮಿಯನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News