ಕುಮಾರಸ್ವಾಮಿ ಎದುರು ಕಣ್ಣೀರು ಹಾಕಿದ ಡಿ.ಕೆ.ಶಿವಕುಮಾರ್ ತಾಯಿ

Update: 2019-09-06 12:32 GMT

ರಾಮನಗರ, ಸೆ. 6: ಈ.ಡಿ ಕಸ್ಟಡಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರ ತಾಯಿಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ್ದು, ಈ ವೇಳೆ ಡಿಕೆಶಿ ತಾಯಿ ಗೌರಮ್ಮ ಅವರು ಕಣ್ಣೀರು ಹಾಕಿದ ಘಟನೆ ನಡೆದಿದೆ.

ಕುಮಾರಸ್ವಾಮಿ ಅವರು ಡಿಕೆಶಿ ತಾಯಿ ಗೌರಮ್ಮ ಅವರನ್ನು ಭೇಟಿ ಮಾಡಲು ಬಂದಿದ್ದರು. ಗೌರಮ್ಮ ಅವರ ಕಾಲಿಗೆ ಕುಮಾರಸ್ವಾಮಿ ನಮಸ್ಕರಿಸಿದ್ದು, ಈ ವೇಳೆ ಗೌರಮ್ಮ ಅವರು ಕೈ ಮುಗಿದು ಕಣ್ಣೀರು ಹಾಕಿದರು. 'ನಿಮ್ಮ ಕಷ್ಟದಲ್ಲಿ ನಾನು ಕೂಡ ಭಾಗಿಯಾಗಿದ್ದೇವೆ. ಕಣ್ಣೀರು ಹಾಕಬೇಡಿ. ಧೈರ್ಯ ತಂದುಕೊಳ್ಳಿ ಎಂದು ಹೆಚ್ಡಿಕೆ ಸ್ಥೈರ್ಯ ತುಂಬಿದರು.

'ಈಡಿ, ಐಟಿ ಅಧಿಕಾರಿಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಗುಜರಾತ್ ಶಾಸಕರಿಗೆ ರಕ್ಷಣೆ ಕೊಟ್ಟ ನಂತರ ನಿರಂತರವಾಗಿ ತೊಂದರೆ ನೀಡುತ್ತಿದ್ದಾರೆ. ಅವರೇನು ಸಾಕ್ಷ್ಯ ನಾಶ ಮಾಡಿಲ್ಲ ಎಂದ ಅವರು, ನಮ್ಮ ಶಾಸಕರನ್ನು ಹೈಜಾಕ್ ಮಾಡಲು 30 ಕೋಟಿ ರೂ. ಕೊಟ್ಟಿದ್ದಾರೆ. ಅವರ ಮೇಲೆ ಯಾವ ದಾಳಿಯೂ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ಧಾರ್ಥ ಅವರು ಐಟಿ ಇಲಾಖೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಅವರು, ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ. ಕರ್ನಾಟಕದಲ್ಲಿ ಇದು ಹೊಸ ಅಧ್ಯಾಯಕ್ಕೆ ಕಾರಣವಾಗಲಿದೆ. ಈ ಪ್ರಕರಣ ಖಂಡನೀಯ ಎಂದರು.

ಅವರನ್ನ ಕಸ್ಟಡಿಗೆ ತಗೆದುಕೊಂಡು ತನಿಖೆ ಮಾಡುವ ಅವಶ್ಯಕತೆ ಇರಲಿಲ್ಲ. ದ್ವೇಷದ ರಾಜಕಾರಣ ಮಾಡಲ್ಲ ಎನ್ನುತ್ತಾರೆ. ಆದರೆ ಅವರು ಮಾಡುತ್ತಿರುವುದು ದ್ವೇಷದ ರಾಜಕಾರಣ ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News