ಸೆಂಥಿಲ್ ರಾಜೀನಾಮೆ ವಾಪಾಸ್‍ಗೆ ಆಗ್ರಹಿಸಿ ಧರಣಿ ಕುಳಿತ 96 ವರ್ಷದ ಪತ್ರಕರ್ತ

Update: 2019-09-06 12:50 GMT

ಶಿವಮೊಗ್ಗ, ಸೆ. 6: ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್‍ರವರು ನೀಡಿರುವ ರಾಜೀನಾಮೆ ವಾಪಾಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ಅವರ ರಾಜೀನಾಮೆ ಅಂಗೀಕರಿಸಬಾರದು ಎಂದು ಆಗ್ರಹಿಸಿ ಹಿರಿಯ ಪತ್ರಕರ್ತ, 96 ವರ್ಷದ ಕಾಮ್ರೇಡ್ ಎಂ.ಲಿಂಗಪ್ಪರವರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. 

ಸಸಿಕಾಂತ್ ಸೆಂಥಿಲ್‍ರವರು ಜನಪರ, ಸಾಮಾಜಿಕ ಕಾಳಜಿವುಳ್ಳ, ಶೋಷಿತ, ದೀನ-ದಲಿತರ ಏಳ್ಗೆಗೆ ಶ್ರಮಿಸುತ್ತಿರುವ ಅಪರೂಪದ ಅಧಿಕಾರಿ. ಎಲ್ಲದಕ್ಕಿಂತ ಮುಖ್ಯವಾಗಿ ಪ್ರಾಮಾಣಿಕ, ದಕ್ಷ, ನೇರ ವ್ಯಕ್ತಿತ್ವದವರಾಗಿದ್ದಾರೆ. ಇವರು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ವೇಳೆ ಉತ್ತಮವಾಗಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆ ಪಾತ್ರವಾಗಿದ್ದರು. ಅವರು ಕಾರ್ಯನಿರ್ವಹಿಸಿದ ಎಲ್ಲೆಡೆಯೂ ಉತ್ತಮ ಹೆಸರು ಸಂಪಾದಿಸಿದ್ದಾರೆ. ಇಂತಹ ಅಧಿಕಾರಿಯ ಸೇವೆಯು ಈ ರಾಜ್ಯಕ್ಕೆ, ಸಮಾಜಕ್ಕೆ ಪ್ರಸಕ್ತ ಸಂದರ್ಭದಲ್ಲಿ ಅತ್ಯವಶ್ಯಕವಾಗಿದೆ ಎಂದು ತಿಳಿಸಿದ್ದಾರೆ. 

ಜನ ಹಾಗೂ ನಾಡಿನ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಸೆಂಥಿಲ್‍ರವರು ತಮ್ಮ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂಪಡೆಯಬೇಕು. ಈ ಸಂಬಂಧ ರಾಜ್ಯ ಸರ್ಕಾರವು ಅವರ ಮನವೊಲಿಸುವ ಕಾರ್ಯ ನಡೆಸಬೇಕು. ಯಾವುದೇ ಕಾರಣಕ್ಕೂ ಅವರ ರಾಜೀನಾಮೆ ಅಂಗೀಕರಿಸಬಾರದು ಎಂದು ಪತ್ರಕರ್ತ ಕಾಮ್ರೇಡ್ ಎಂ. ಲಿಂಗಪ್ಪರವರು ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News