ಉ. ಕೊರಿಯದ ಪರಮಾಣು ಅಸ್ತ್ರ ಕಾರ್ಯಕ್ರಮ ಮುಂದುವರಿಕೆ: ವಿಶ್ವಸಂಸ್ಥೆ ವರದಿ

Update: 2019-09-06 17:03 GMT

ಸಿಯೋಲ್, ಸೆ. 6: ಉತ್ತರ ಕೊರಿಯವು ಆರ್ಥಿಕ ದಿಗ್ಬಂಧನಗಳಿಂದ ನುಣುಚಿಕೊಂಡು, ತನ್ನ ಪರಮಾಣು ಅಸ್ತ್ರ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

ಪರಮಾಣು ಸ್ಫೋಟಗಳು ಮತ್ತು ದೀರ್ಘ ವ್ಯಾಪ್ತಿಯ ಕ್ಷಿಪಣಿ ಉಡಾವಣೆಗಳನ್ನು ನಿಲ್ಲಿಸುವುದಾಗಿ ಉತ್ತರ ಕೊರಿಯವು ಘೋಷಿಸಿತ್ತು ಹಾಗೂ ಪುಂಗ್ಯೆ-ರಿ ಪರಮಾಣು ಬಾಂಬ್ ಸ್ಫೋಟ ಸ್ಥಳವು ಇನ್ನು ಬೇಕಾಗಿಲ್ಲವಾದುದರಿಂದ, ಅದನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಕಳೆದ ವರ್ಷ ಅದು ಹೇಳಿತ್ತು.

ಆದರೆ, ಇವುಗಳ ಹೊರತಾಗಿಯೂ, ಉತ್ತರ ಕೊರಿಯವು ಪರಮಾಣು ಸಿಡಿತಲೆಗಳನ್ನು ಅಭಿವೃದ್ಧಿಪಡಿಸುವುದನ್ನು ನಿಲ್ಲಿಸಿಲ್ಲ ಎಂದು ಗುರುವಾರ ಪ್ರಕಟಗೊಂಡ ಪರಿಣತರ ಮಂಡಳಿಯ ವರದಿಯೊಂದು ತಿಳಿಸಿದೆ.

‘‘ಪರಮಾಣು ಪರೀಕ್ಷೆ ಸ್ಥಗಿತ ಮತ್ತು ಪುಂಗ್ಯೆ-ರಿ ಪರಮಾಣು ಪರೀಕ್ಷೆ ಸ್ಥಳದ ಮುಚ್ಚುಗಡೆಯ ಹೊರತಾಗಿಯೂ, ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯದ ಪರಮಾಣು ಕಾರ್ಯಕ್ರಮ ಈಗಲೂ ಮುಂದುವರಿಯುತ್ತಿದೆ’’ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News