ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-09-06 19:11 GMT

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):
ವಿದೇಶಿ ಮಾಸ್ಟರ್ಸ್ ವಿದ್ಯಾರ್ಥಿಗಳಿಗಾಗಿ ಡೋರಾ ಪ್ಲಸ್ ವಿದ್ಯಾರ್ಥಿವೇತನ 2019

ವಿವರ: ಯೂರೋಪ್‌ನಲ್ಲಿ ಮಾಸ್ಟರ್ಸ್ ಪದವಿ ಪಡೆಯಲು ಬಯಸುವ ವಿದ್ಯಾರ್ಥಿಗಳು ಯೂರೋಪ್‌ನ ಎಸ್ಟೋನಿಯದ ಅತೀದೊಡ್ಡ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುವ ಅವಕಾಶ ಪಡೆಯಲು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಬಹುದು. ಅಂತರ್‌ರಾಷ್ಟ್ರೀಯ ವಿದ್ಯಾರ್ಥಿಗಳು ಶಿಷ್ಯವೇತನ ಪಡೆದು ಜಾಗತಿಕ ಶಿಕ್ಷಣ ಪಡೆಯಲು ಸಹಾಯವಾಗುವ ಉದ್ದೇಶದಿಂದ ಟಾಲಿನ್ ವಿಶ್ವವಿದ್ಯಾನಿಲಯ ವಿದ್ಯಾರ್ಥಿವೇತನ ನೀಡುತ್ತಿದೆ.
ಅರ್ಹತೆ: ಟಾಲಿನ್ ವಿಶ್ವವಿದ್ಯಾನಿಲಯದಲ್ಲಿ ಪೂರ್ಣಾವಧಿ ಸ್ನಾತಕೋತರ ಪದವಿಗೆ ನೋಂದಾಯಿಸಿರುವ/ಸ್ವೀಕರಿಸಲ್ಪಟ್ಟಿರುವ ಆದರೆ ಈವರೆಗೆ ಯಾವುದೇ ಇತರ ಶಿಷ್ಯವೇತನ ಪಡೆಯದಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಬಹುದು.
ನೆರವು: ಆಯ್ದ ವಿದ್ಯಾರ್ಥಿಗಳಿಗೆ ಒಂದು ವರ್ಷದವರೆಗೆ ಮಾಸಿಕ 350 ಯೂರೊ (28,000ರೂ.) ನೀಡಲಾಗುವುದು.
  ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 10, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/DPS1

********************
ವಿದ್ಯಾರ್ಥಿವೇತನ
(ಸಂಶೋಧನೆ ಮಟ್ಟ):
ವಿಸ್ಟ ಡಿಸ್ಟಿಂಗ್ವಿಶ್ಡ್ ಪೋಸ್ಟ್ ಡಾಕ್ಟೊರಲ್ ಶಿಷ್ಯವೇತನ 2019

ವಿವರ: ಭಾರತದ ಪ್ರತಿಭಾನ್ವಿತ ಸಂಶೋಧಕರು ಅಗ್ರಮಾನ್ಯ ವಿಸ್ಟ (ವಿಶನ್: ಸೈನ್ಸ್ ಟು ಅಪ್ಲಿಕೇಶನ್ಸ್) ಕಾರ್ಯಕ್ರಮದಡಿ ಪೋಸ್ಟ್ ಡಾಕ್ಟೊರಲ್ ಸಂಶೋಧನೆಯನ್ನು ಮಾಡಲು ಕೆನಡದ ಯೋರ್ಕ್ ವಿಶ್ವವಿದ್ಯಾನಿಲಯ ಶೀಷ್ಯವೇತನ ಘೋಷಿಸಿದೆ. ಈ ಯೋಜನೆಯು ಪಿಎಚ್‌ಡಿ ಪದವೀಧರರು ಜಾಗತಿಕವಾಗಿ ಬೆಳಕಿಗೆ ಬರಲು ಮತ್ತು ಅಂತರ್‌ರಾಷ್ಟ್ರೀಯ ಸಂಶೋಧನಾ ಜಾಲವನ್ನು ನಿರ್ಮಿಸಲು ಅವಕಾಶ ಕಲ್ಪಿಸುತ್ತದೆ.
ಅರ್ಹತೆ: ವಿಸ್ಟ ಯೋಜನೆಯಡಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆ ಮಾಡಲು ಬಯಸುವ ಭಾರತೀಯ ಪಿಎಚ್‌ಡಿ ಪದವೀಧರರು ಈ ಶಿಷ್ಯವೇತನ ಪಡೆಯಬಹುದು.

ನೆರವು: ಆಯ್ದ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕಾಲ 70,000 ಕೆನಡಿಯನ್ ಡಾಲರ್ (38 ಲಕ್ಷ ರೂ.) ನೀಡಲಾಗುವುದು ಮತ್ತು ಪೋಸ್ಟ್ ಡಾಕ್ಟೋರಲ್ ಶಿಕ್ಷಣ ಪೂರ್ಣಗೊಳ್ಳುವ ಅವಧಿಯವರೆಗೆ ವಾರ್ಷಿಕ ಸಂಶೋಧನೆ ಭತ್ತೆ 7,500 ಸಿಎಡಿ (4 ಲಕ್ಷ ರೂ.) ಮತ್ತು ನೆಟ್‌ವರ್ಕಿಂಗ್ ಭತ್ತೆ 1,000 ಸಿಎಡಿ (54,000 ರೂ.) ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 13, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಜಾಲತಾಣ: http://www.b4s.in/bharati/ VDP1

****************

ವಿದ್ಯಾರ್ಥಿವೇತನ
(ರಾಷ್ಟ್ರೀಯ ಮಟ್ಟ):
ಎಐಸಿಟಿಇ ಪಿಜಿ (ಗೇಟ್/ಜಿಪಿಎಟಿ)
ವಿದ್ಯಾರ್ಥಿವೇತನ 2019-20

ವಿವರ: ಪ್ರತಿಭಾನ್ವಿತ ವಿದ್ಯಾರ್ಥಿಗಳು ತಾಂತ್ರಿಕ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ನೆರವಾಗಲು ಎಐಸಿಟಿಇ ಮತ್ತು ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ವಿದ್ಯಾರ್ಥಿವೇತನ ಘೋಷಿಸಿದೆ. ಭಾರತದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಅರ್ಹತೆ: 2019-20ರ ಶೈಕ್ಷಣಿಕ ವರ್ಷದಲ್ಲಿ ಎಐಸಿಟಿಇ ಪರಿಗಣಿತ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಎಂ.ಟೆಕ್/ಎಂ.ಇ/ಎಂ.ಫಾರ್ಮ./ಎಂ.ಆರ್ಕ್ ಶಿಕ್ಷಣಕ್ಕೆ ನೋಂದಾಯಿಸಿ ಕೊಂಡಿರುವ ಮಾನ್ಯವಾಗಿರುವ ಗೇಟ್/ಜಿಪಿಎಟಿ ಅಂಕ ಹೊಂದಿರುವ ಭಾರತೀಯ ಪದವೀಧರರು ಅರ್ಜಿ ಹಾಕಬಹುದು.
ನೆರವು: ಆಯ್ದ ಅಭ್ಯರ್ಥಿಗಳು ತಮ್ಮ ಸ್ನಾತಕೋತ್ತರ ಪದವಿ ಶಿಕ್ಷಣದ ವೆಚ್ಚವನ್ನು ಭರಿಸಲು ಎರಡು ವರ್ಷಗಳ ಅವಧಿಗೆ ಮಾಸಿಕ 12,400 ರೂ. ಪಡೆಯುವರು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 30, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/AEW3

**************************
 ವಿದ್ಯಾರ್ಥಿವೇತನ
(ಆದಾಯ ಆಧಾರಿತ):
ಉನ್ನತ ಶಿಕ್ಷಣಕ್ಕಾಗಿ ಪ್ರೊ.ಘನಶ್ಯಾಮ ದಾಸ್ ವಿದ್ಯಾರ್ಥಿವೇತನ 2019

ವಿವರ: ಒಡಿಶಾದ (ಒಡಿಶಾದ ಶಾಶ್ವತ ನಿವಾಸಿಗಳಾ ಗಿರಬೇಕು) ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಮಕ್ಕಳು ವಿವಿಧ ವಿಷಯಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬನ್ಸಿಧರ್ ಮತ್ತು ಇಳಾ ಪ್ರತಿಷ್ಠಾನ (ಬಿಐಪಿಎಫ್) ವಿದ್ಯಾರ್ಥಿವೇತನ ನೀಡುತ್ತಿದೆ. ಆಯ್ದ ವಿದ್ಯಾರ್ಥಿಗಳು ಬಿಐಪಿಎಫ್ ನೀಡುವ ಆರ್ಥಿಕ ನೆರವಿನ ಸಹಾಯದಿಂದ ಉನ್ನತ ಶಿಕ್ಷಣ ಪಡೆಯಬಹುದಾಗಿದೆ.

ಅರ್ಹತೆ: ಯಾವುದೇ ಸರಕಾರಿ ಅಥವಾ ಯುಜಿಸಿ ಪರಿಗಣಿತ ಸಂಸ್ಥೆಯಲ್ಲಿ ಇಂಜಿನಿಯರಿಂಗ್, ಔಷಧಿ ಮತ್ತು ಸ್ವತಂತ್ರ ಕಲೆ ವಿಭಾಗದಲ್ಲಿ ಪ್ರಥಮ ವರ್ಷದ ಯುಜಿ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ.ಗೂ ಕಡಿಮೆಯಿರುವ ವಿದ್ಯಾರ್ಥಿಗಳು ಈ ಶಿಷ್ಯವೇತನ ಪಡೆಯಲು ಅರ್ಹರಾಗುತ್ತಾರೆ.
ನೆರವು: ಆಯ್ದ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ವೆಚ್ಚದ ಶೇ.90 (ವಾರ್ಷಿಕ ಒಂದು ಲಕ್ಷ ರೂ.ವರೆಗೆ) ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 16, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/BGP2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News