ಇಸ್ರೋ ವಿಜ್ಞಾನಿಗಳ ಸಾಧನೆ ಸಣ್ಣದಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-09-07 13:04 GMT

ಬೆಂಗಳೂರು, ಸೆ. 7: ಇಸ್ರೋ ವಿಜ್ಞಾನಿಗಳ ಪ್ರಯತ್ನ, ಪರಿಶ್ರಮಕ್ಕೆ ಅಭಿನಂದನೆ. ಪ್ರಧಾನಿ ಮೋದಿಯವರು ಹೇಳಿದಂತೆ ಇದು ಸಣ್ಣ ಸಾಧನೆಯಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

‘ಉತ್ತಮ ಫಲಿತಾಂಶಗಳ ನಿರೀಕ್ಷೆಯೊಂದಿಗೆ ಅಂತರಿಕ್ಷದ ಅನ್ವೇಷಣೆಯ ಪಯಣ ಹೀಗೇ ಮುಂದುವರೆಯಲಿ, ನಿಮ್ಮ ಪ್ರಯತ್ನ ವ್ಯರ್ಥವಾಗದು. ನಿಮ್ಮ ಸಾಧನೆ, ನಮ್ಮ ಹೆಮ್ಮೆ ಎಂದು ಅವರು ವಿಜ್ಞಾನಿಗಳಿಗೆ ನೀಡಿರುವ ಸಂದೇಶದಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ’ ಎಂದು ಬಿಎಸ್‌ವೈ ಟ್ವೀಟ್ಟರ್ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News