ಮಂಡ್ಯ ಹಾಲು ಒಕ್ಕೂಟ ಆಡಳಿತ ಜೆಡಿಎಸ್ ತೆಕ್ಕೆಗೆ

Update: 2019-09-08 18:30 GMT

ಮಂಡ್ಯ, ಸೆ.8: ಪ್ರತಿಷ್ಠಿತ ಜಿಲ್ಲಾ ಹಾಲು ಒಕ್ಕೂಟ(ಮನ್‍ಮುಲ್)ದ ನಿರ್ದೇಶಕ ಮಂಡಳಿಗೆ ರವಿವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಜಯಭೇರಿ ಭಾರಿಸಿದ್ದಾರೆ.

ಜಿದ್ದಾಜಿದ್ದಿ ಹೋರಾಟ ಮತ್ತು ಭಾರಿ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಪ್ರಾಬಲ್ಯ ಮೆರೆದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ಜಿಲ್ಲೆಯ 7 ತಾಲೂಕುಗಳಿಂದ 12 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 8 ಅಭ್ಯರ್ಥಿಗಳು, ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳು ಹಾಗು ಬಿಜೆಪಿ ಬೆಂಬಲಿತ 1 ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಮಳವಳ್ಳಿ ತಾಲೂಕಿನಿಂದ ವಿಶ್ವನಾಥ್ (ಜೆಡಿಎಸ್), ನಾಗಮಂಗಲದಿಂದ ನೆಲ್ಲಿಗೆರೆ ಬಾಲು, ರವಿ (ಜೆಡಿಎಸ್), ಮದ್ದೂರಿನಿಂದ ಎಸ್.ಪಿ.ಸ್ವಾಮಿ(ಜೆಡಿಎಸ್), ರೂಪ (ಬಿಜೆಪಿ), ಕೆ.ಆರ್.ಪೇಟೆ ಕ್ಷೇತ್ರದಿಂದ ಎಚ್.ಟಿ.ಮಂಜು (ಜೆಡಿಎಸ್), ರವಿ (ಕಾಂಗ್ರೆಸ್), ಶ್ರೀರಂಗಪಟ್ಟಣದಿಂದ ಬೋರೇಗೌಡ (ಕಾಂಗ್ರೆಸ್), ಪಾಂಡವಪುರದಿಂದ ರಾಮಚಂದ್ರ (ಜೆಡಿಎಸ್), ಮಂಡ್ಯ ತಾಲೂಕಿನಿಂದ ರಾಮಚಂದ್ರ, ರಘುನಂದನ್ (ಜೆಡಿಎಸ್), ಶಿವಪ್ಪ (ಕಾಂಗ್ರೆಸ್) ಗೆಲುವು ಸಾಧಿಸಿದ್ದಾರೆ.

1,081 ಮತದಾರರು ಹಕ್ಕು ಚಲಾವಣೆ ಮಾಡುವ ಹಕ್ಕು ಪಡೆದಿದ್ದು, ಶೇ.99.72 ರಷ್ಟು ಮತದಾನ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News