ವಿದೇಶಿ ಕೋಚ್ ನೆರವಿನಲ್ಲಿ ನನ್ನ ಆಟದಲ್ಲಿ ಸುಧಾರಣೆ: ಸಿಂಧು

Update: 2019-09-08 18:47 GMT

 ಮುಂಬೈ, ಸೆ.8: ಭಾರತದ ವಿದೇಶಿ ಬ್ಯಾಡ್ಮಿಂಟನ್ ಕೋಚ್ ಕಿಮ್ ಜಿ ಹ್ಯೂನ್ ಸಹಾಯದಿಂದ ತನ್ನ ಆಟದಲ್ಲಿ ಸುಧಾರಣೆ ತರಲು ಸಾಧ್ಯವಾಯಿತು ಎಂದು ವರ್ಲ್ಡ್ ಚಾಂಪಿಯನ್ ಪಿ.ವಿ.ಸಿಂಧು ಹೇಳಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪಡೆದ ಸಿಂಧು ಬಿಡಬ್ಲುಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಜಪಾನ್‌ನ ನೊರೊಮಿ ಒಕುಹರಾ ಅವರನ್ನು ಮಣಿಸಿ ಮೊದಲ ಬಾರಿ ವರ್ಲ್ಡ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದರು.

 ಕೋಚ್ ಕಿಮ್ ಸಲಹೆ ನಿಮ್ಮ ಆಟದ ಮೇಲೆ ಹೇಗೆ ಪರಿಣಾಮ ಬೀರಿದೆ ?ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಧು ‘‘ಕೋಚ್ ಕಿಮ್ ಇಲ್ಲಿ ಕೆಲವು ತಿಂಗಳು ಮಾತ್ರ ಇದ್ದರೂ ಅವರು ನೀಡಿದ ಸಲಹೆ ನನೆಗೆ ನನ್ನ ಆಟದಲ್ಲಿ ಸುಧಾರಣೆ ತರಲು ಸಾಧ್ಯವಾಗಿದೆ’’ ಎಂದು ಹೇಳಿದ್ದಾರೆ.

‘‘ಗೋಫಿ ಸರ್ (ಪಿ. ಗೋಪಿಚಂದ್) ಮಾರ್ಗದರ್ಶನದಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸಿದ್ದೆ. ಇದರ ಜೊತೆಗೆ ಕೋಚ್ ಕಿಮ್ ಜಿ ಹ್ಯೂನ್ ನೀಡಿದ ಉಪಯುಕ್ತ ಸಲಹೆ ಆಟದಲ್ಲಿ ಕೆಲವೊಂದು ಬದಲಾವಣೆಗೆ ನೆರವಾಯಿತು’’ ಎಂದು ಹೇಳಿದ್ದಾರೆ. 2017ರಲ್ಲಿ ನಡೆದ ಫೈನಲ್‌ನಲ್ಲಿ ಒಕುಹರಾ ವಿರುದ್ಧ ಸಿಂಧು ಸೋಲು ಅನುಭವಿಸಿದ್ದರು. ಈ ಬಗ್ಗೆ ಕೇಳಿದಾಗ ‘‘ನಾವು ಹಲವು ಬಾರಿ ಮುಖಾಮುಖಿಯಾಗಿದ್ದೆವು. ನಾನು ಆಡುವಾಗ ಹಿಂದಿನ ಘಟನೆಯ ಬಗ್ಗೆ ಯೋಚನೆ ಮಾಡಲಿಲ್ಲ. ಧನಾತ್ಮಕ ಚಿಂತನೆಯೊಂದಿಗೆ ಆಡಲು ಇಳಿದಿದ್ದೆ’’ ಎಂದರು ಸಿಂಧು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News