ಬಸವಣ್ಣನ ವಚನ ತಿರುಚಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ !

Update: 2019-09-09 16:47 GMT

ಬೀದರ್, ಸೆ.9: ಸಮಾಜ ಸುಧಾರಕ ಬಸವಣ್ಣನವರ ವಚನವೊಂದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ತಿರುಚಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ ನಗರ ವ್ಯಾಪ್ತಿಯ ಬಿಜೆಪಿ ಮುಖಂಡರೊಂದಿಗೆ ವಿಶೇಷ ಸಭೆ ನಡೆಸಿ ಮಾತನಾಡಿದ ಅವರು, ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಿ, ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದಿನಸಯ್ಯಿ, ಕೂಡಲ ಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯಿ ಎನ್ನುವ ಬದಲಾಗಿ, ‘ಅವನಾರವ, ಅವನಾರವ, ಅವನಾರವ ಎಂದೆನಿಸಯ್ಯಿ’ ಎಂದು ತಿರುಚಿ ಹೇಳಿದರು ಎನ್ನಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈದರಾಬಾದ್ ಕರ್ನಾಟಕಕ್ಕೆ , ಕಲ್ಯಾಣ ಕರ್ನಾಟಕ ಎಂದು ನಾಮಕಾರಣ ಮಾಡಿದ್ದಾರೆ. ಈ ಕಲ್ಯಾಣ ಕರ್ನಾಟಕವೂ ಕೂಡ ಬಸವಣ್ಣನವರ ಕನಸೇ ಆಗಿತ್ತು. ಆದರೆ ಬಿಜೆಪಿಯ ರಾಜ್ಯಾಧ್ಯಕ್ಷರಾದ ಕಟೀಲ್, ಬಸವಣ್ಣನ ವಚನವನ್ನು ತಿರುಚಿ ಹೇಳುವ ಮೂಲಕ ಬಸವಣ್ಣನವರಿಗೆ, ವಚನ ಸಾಹಿತ್ಯಕ್ಕೆ ಮತ್ತು ಕಲ್ಯಾಣ ಕರ್ನಾಟಕದ ಜನತೆಗೆ ಅವಮಾನಿಸಿದ್ದಾರೆಂದು ಸ್ಥಳೀಯರು ವ್ಯಾಖ್ಯಾನಿಸತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News