1,300 ಮಂದಿಯ ಕ್ರೆಡಿಟ್ ಕಾರ್ಡ್ ವಿವರ ಬಾಯಿಪಾಠ ಮಾಡಿಕೊಂಡಿರುವ ಜಪಾನಿನ ಗುಮಾಸ್ತ!

Update: 2019-09-09 18:24 GMT

ಟೋಕಿಯೊ, ಸೆ. 9: ಆನ್‌ಲೈನ್ ಮಾಹಿತಿ ಕಳವು ಸಾಮಾನ್ಯವಾಗುತ್ತಿರುವ ಇಂದಿನ ದಿನಗಳಲ್ಲಿ, ಜಪಾನ್‌ನ ಗುಮಾಸ್ತನೊಬ್ಬ ಕ್ರೆಡಿಟ್ ಕಾರ್ಡ್‌ಗಳನ್ನು ಕೇವಲ ಒಮ್ಮೆ ನೋಡಿ ಅವುಗಳ ವಿವರಗಳನ್ನು ಬಾಯಿಪಾಠ ಮಾಡಿಕೊಂಡಿದ್ದಾನೆ ಹಾಗೂ ಈ ಮೂಲಕ 1,300ಕ್ಕೂ ಅಧಿಕ ಗ್ರಾಹಕರ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

 ಕೋಟೊ ನಗರದ ಮಾಲ್ ಒಂದರಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿರುವ ತನಿಗುಚಿ, ಗ್ರಾಹಕರು ಹಣಪಾವತಿಗಾಗಿ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವಾಗ ಒಂದೇ ನೋಟದಲ್ಲಿ ಅದರ 16 ಅಂಕಿಗಳ ಸಂಖ್ಯೆ, ಹೆಸರು, ವಾಯಿದೆ ಮುಗಿಯುವ ದಿನಾಂಕ ಮತ್ತು ಸೆಕ್ಯುರಿಟಿ ಕೋಡ್‌ಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದನು ಎಂದು ‘ಜಪಾನ್‌ ಟುಡೇ. ಕಾಮ್’ನ ವರದಿಯೊಂದು ತಿಳಿಸಿದೆ.

ಬಳಿಕ, ಆ ವಿವರಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಖರೀದಿ ಮಾಡುತ್ತಿದ್ದನು ಎಂದು ಪೊಲೀಸರು ಹೇಳಿದರು.

 ಶರ್ಲಾಕ್ ಹೊಮ್ಸ್ ಮಟ್ಟದ ನೆನಪಿನ ಶಕ್ತಿಯನ್ನು ಹೊಂದಿದ್ದರೂ, ಆತ ಎರಡು ಬ್ಯಾಗ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ ಬಳಿಕ ಪೊಲೀಸರು ನೇರವಾಗಿ ಅವನನ್ನು ಹುಡುಕಿಕೊಂಡು ಬಂದರು. ವಸ್ತುಗಳ ಖರೀದಿಗೆ ಆತ ತನ್ನ ನಿಜವಾದ ವಿಳಾಸವನ್ನೇ ನೀಡಿದ್ದ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News