ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಊರ್ಮಿಳಾ ಮಾತೋಂಡ್ಕರ್

Update: 2019-09-10 17:00 GMT
ಹೊಸದಿಲ್ಲಿ, ಸೆ.10: ಕಳೆದ ಮಾರ್ಚ್ನಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದ ಹಿಂದಿ ಊರ್ಮಿಳಾ ಮಾತೋಂಡ್ಕರ್ ಮಂಗಳವಾರ ಕಾಂಗ್ರೆಸ್ಗೆ ರಾಜೀನಾಮೆ ಸಲ್ಲಿಸಿದ್ದಾರೆ. ದೊಡ್ಡ ಮಟ್ಟದ ಗುರಿ ಇಟ್ಟುಕೊಂಡು ಹೋರಾಟ ನಡೆಸುವ ಬದಲು ಮುಂಬೈ ಕಾಂಗ್ರೆಸ್ ಆಂತರಿಕ ಕಚ್ಚಾಟದಲ್ಲಿ ಮಗ್ನವಾಗಿದೆ. ಇದರಿಂದ ಬೇಸತ್ತು ಪಕ್ಷ ತೊರೆಯಲು ನಿರ್ಧರಿಸಿರುವುದಾಗಿ ಊರ್ಮಿಳಾ ತಿಳಿಸಿದ್ದಾರೆ. ಈ ಕುರಿತು ಆತಂಕ ವ್ಯಕ್ತಪಡಿಸಿ ಮೇ 16ರಂದು ಮುಂಬೈ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಲಿಂದ್ ದೇವರಗೆ ಪತ್ರ ಬರೆದಿದ್ದೆ. ಆದರೆ ಇದರ ಕೆಲವು ಭಾಗಗಳನ್ನು ಉದ್ದೇಶಪೂರ್ವಕವಾಗಿ ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ. ಪಕ್ಷದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ತನ್ನನ್ನು ಆಂತರಿಕ ಕಚ್ಛಾಟಕ್ಕೆ ಬಳಸಿಕೊಳ್ಳುವುದನ್ನು ತನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಆದ್ದರಿಂದ ರಾಜೀನಾಮೆ ನೀಡುವುದಾಗಿ ಊರ್ಮಿಳಾ ಮಾತೋಂಡ್ಕರ್ ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಗೋಪಾಲ ಶೆಟ್ಟಿ ವಿರುದ್ಧ ಸ್ಪರ್ಧಿಸಿದ್ದ ಊರ್ಮಿಳಾ ಸೋತಿದ್ದರೂ 2 ಲಕ್ಷಕ್ಕೂ ಅಧಿಕ ಮತ ಗಳಿಸುವ ಮೂಲಕ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News