ಸುಂಟಿಕೊಪ್ಪ: ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Update: 2019-09-11 11:59 GMT

ಸುಂಟಿಕೊಪ್ಪ,ಸೆ.11: ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯತ್ ನ ಹಾರ್‍ಬೈಲ್ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಹಾರ್‍ಬೈಲ್ ಹೊಳೆಯಲ್ಲಿ ಬುಧವಾರ ಬೆಳಗ್ಗೆ ಅಂದಾಜು 40 ರಿಂದ 45 ವಯೋಮಾನದ ವ್ಯಕ್ತಿಯ ಮೃತದೇಹ ಕಂಡು ಬಂದಿದ್ದು, ಮುಖದ ಭಾಗ ನೀರಿನಲ್ಲಿ ಮುಳುಗಿಸ ಸ್ಥಿತಿಯಲ್ಲಿ ಕಂಡುಬಂದಿದೆ.

ಈ ಮೃತದೇಹವು ಹಟ್ಟಿಹೊಳೆ ಕಡೆಯಿಂದ ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಮಹಜರು ಪರಿಶಿಲನೆ ನಡೆಸಿದರು.

ಮೃತದೇಹವು ಕೆಂಪು ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ತೊಟ್ಟಿರುವುದು ಕಂಡು ಬಂದಿದೆ. ಶವವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. 

ವ್ಯಕ್ತಿಯ ಸಂಬಂಧಿಕರು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸುಂಟಿಕೊಪ್ಪ ಪೊಲೀಸ್ ಠಾಣೆ 08276 262333, 9480804953 ಸಂಪರ್ಕಿಸುವಂತೆ ಸುಂಟಿಕೊಪ್ಪ ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News