ಮೊಬೈಲ್ ನಲ್ಲಿ ಮಾತನಾಡುತ್ತಾ ಹಾವುಗಳ ಮೇಲೆ ಕುಳಿತ ಮಹಿಳೆ ಕಡಿತದಿಂದ ಮೃತ್ಯು

Update: 2019-09-12 11:15 GMT
ಸಾಂದರ್ಭಿಕ ಚಿತ್ರ

ಗೋರಖಪುರ್: ಮೊಬೈಲ್ ಫೋನ್ ಸಂಭಾಷಣೆಯಲ್ಲಿ ಮುಳುಗಿದ್ದ ಮಹಿಳೆಯೊಬ್ಬಳು ಅಚಾನಕ್ಕಾಗಿ ಜೋಡಿ ಹಾವುಗಳ ಮೇಲೆ ಕುಳಿತ ಪರಿಣಾಮ ಬೆದರಿದ ಹಾವುಗಳು ಆಕೆಯನ್ನು ಕಚ್ಚಿದ್ದು ಕೆಲವೇ ಕ್ಷಣಗಳಲ್ಲಿ ಆಕೆ ಸಾವನ್ನಪ್ಪಿದ ಘಟನೆ ಗೋರಖಪುರ್ ನ ರಿಯನ್ವ್ ಗ್ರಾಮದಿಂದ ವರದಿಯಾಗಿದೆ.

ಥೈಲ್ಯಾಂಡ್ನಲ್ಲಿ ಉದ್ಯೋಗದಲ್ಲಿರುವ ಜೈ ಸಿಂಗ್ ಯಾದವ್ ಎಂಬವರ ಪತ್ನಿ ಗೀತಾ ಎಂಬ ಮಹಿಳೆಯೇ ಮೃತಪಟ್ಟವರು. ಒಂದು ಜೋಡಿ ಹಾವು ಮನೆಯೊಳಗೆ ಪ್ರವೇಶಿಸಿ ಮಂಚದ ಮೇಲಿದ್ದವು. ಪ್ರಿಂಟೆಡ್ ಬೆಡ್ ಶೀಟ್ ಮೇಲೆ ಹಾವುಗಳಿರುವುದು ಆಕೆಗೆ  ಗೋಚರವಾಗಿರಲಿಲ್ಲ. ಫೋನ್ ನಲ್ಲಿ ಮಾತನಾಡುತ್ತಾ ಕೋಣೆ ಪ್ರವೇಶಿಸಿದ ಗೀತಾ ಹಾಸಿಗೆಯಲ್ಲಿ ಕುಳಿತಾಗ ಹಾವುಗಳು ಆಕೆಯನ್ನು ಕಚ್ಚಿದ ಕೂಡಲೇ ಆಕೆ ಪ್ರಜ್ಞಾಶೂನ್ಯಳಾಗಿದ್ದಳು. ಇತರ ಕುಟುಂಬ ಸದಸ್ಯರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಆಕೆಯ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.

ಘಟನೆಯಿಂದ ಉದ್ರಿಕ್ತರಾದ ನೆರೆಹೊರೆಯವರು ಹಾವುಗಳನ್ನು ಹೊಡೆದು ಸಾಯಿಸಿದ್ದಾರೆ. ಆಕೆ ಹಾವುಗಳ ಮೇಲೆ ಕುಳಿತಾಗ ಅವುಗಳು ಮಿಲನ ಕ್ರಿಯೆಯಲ್ಲಿದ್ದಿರಬೇಕೆಂದು ಪಶುವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News