ಡಿ.ಕೆ.ಶಿವಕುಮಾರ್‌ ಈಡಿ ಕಸ್ಟಡಿ ಅವಧಿ ಸೆ.17ರವರೆಗೆ ವಿಸ್ತರಣೆ

Update: 2019-09-13 12:30 GMT

ಹೊಸದಿಲ್ಲಿ, ಸೆ.12: ಈಡಿ ವಶದಲ್ಲಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು, ಡಿಕೆಶಿ ಅವರ ಈಡಿ ಕಸ್ಟಡಿ ಅವಧಿಯನ್ನು ಸೆ.17ರವರೆಗೆ ವಿಸ್ತರಿಸಿ ಹೊಸದಿಲ್ಲಿಯ ಪಿಎಂಎಲ್ಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಸದ್ಯ ಈಡಿ ವಶದಲ್ಲಿರುವ ಡಿಕೆಶಿಯನ್ನು ಈಡಿ ಅಧಿಕಾರಿಗಳು ಶುಕ್ರವಾರ ಕೋರ್ಟ್ ಮುಂದೆ ಹಾಜರು ಪಡಿಸಿದರು. ಈ ವೇಳೆ ಡಿಕೆಶಿಯ ಕಸ್ಟಡಿಯನ್ನು ಮತ್ತೆ ಕೆಲ ದಿನಗಳ ಕಾಲ ಮುಂದುವರೆಸಲು ಈಡಿ ಮನವಿ ಮಾಡಿತು. ಮನವಿ ಪುರಸ್ಕರಿಸಿದ ನ್ಯಾಯಾಲಯ ಡಿಕೆಶಿ ಅವರನ್ನು ಸೆ.17ರವರೆಗೆ ಈಡಿ ಕಸ್ಟಡಿ ವಿಸ್ತರಿಸಿ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News