ಮಾದಕ ದ್ರವ್ಯ ಗುಳಿಗೆ ವಿತರಣೆ: 8 ಭಾರತೀಯರ ಬಂಧನ

Update: 2019-09-13 13:56 GMT

ನ್ಯೂಯಾರ್ಕ್, ಸೆ. 13: ಲಕ್ಷಾಂತರ ಮಾದಕ ದ್ರವ್ಯ ಗುಳಿಗೆಗಳನ್ನು ಭಾರತದಿಂದ ಆಮದು ಮಾಡಿದ ಹಾಗೂ ಅಮೆರಿಕದಲ್ಲಿ ಜನರು ಮತ್ತು ಸಂಸ್ಥೆಗಳಿಗೆ ಅಂಚೆ ಮತ್ತು ಇತರ ವಾಣಿಜ್ಯ ಕೊರಿಯರ್‌ಗಳ ಮೂಲಕ ವಿತರಿಸಿದ ಆರೋಪದಲ್ಲಿ 8 ಭಾರತೀಯ-ಅಮೆರಿಕನ್ನರನ್ನು ಗುರುವಾರ ಬಂಧಿಸಲಾಗಿದೆ.

ಬಂಧಿತರು ನ್ಯೂಯಾರ್ಕ್ ನಗರದ ಕ್ವೀನ್ಸ್‌ನಲ್ಲಿರುವ ಉಗ್ರಾಣವೊಂದರಲ್ಲಿ ತಮ್ಮ ದಂಧೆ ನಡೆಸುತ್ತಿದ್ದರು. ಅಲ್ಲಿ ಅವರು ಮಾದಕ ದ್ರವ್ಯ ಗುಳಿಗೆಗಳನ್ನು ಪ್ಯಾಕ್ ಮಾಡಿ ಅಮೆರಿಕದಾದ್ಯಂತ ಇರುವ ಬಳಕೆದಾರರಿಗೆ ಅಂಚೆ ಮೂಲಕ ಕಳುಹಿಸುತ್ತಿದ್ದರು ಎಂದು ಕಾನೂನು ಇಲಾಖೆಯ ಹೇಳಿಕೆಯೊಂದು ತಿಳಿಸಿದೆ.

ಮಾದಕ ದ್ರವ್ಯದ ವಿರುದ್ಧ ಹೋರಾಡಲು ಹಾಗೂ ಅದರ ದುರ್ಬಳಕೆ ಮತ್ತು ಅತಿ ಬಳಕೆಯನ್ನು ತಡೆಗಟ್ಟಲು ಟ್ರಂಪ್ ಆಡಳಿತವು ರಾಜ್ಯಗಳು ಮತ್ತು ಸ್ಥಳೀಯ ಸರಕಾರಗಳಿಗೆ 2 ಬಿಲಿಯ ಡಾಲರ್ (ಸುಮಾರು 14,200 ಕೋಟಿ ರೂಪಾಯಿ) ಬಿಡುಗಡೆ ಮಾಡಿರುವ ಹಂತದಲ್ಲೇ ಬಂಧನ ಕಾರ್ಯ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News