ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-09-13 18:31 GMT

ವಿದ್ಯಾರ್ಥಿವೇತನ

(ಅರ್ಹತೆ ಮತ್ತು ಆದಾಯ ಆಧಾರಿತ):

ಕೀಪ್ ಇಂಡಿಯಾ ಸ್ಮೈಲಿಂಗ್ ಪ್ರತಿಷ್ಠಾನದ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಕಾರ್ಯಕ್ರಮ 2019

ವಿವರ: ಯುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ನೆರವಾಗಲು ಕೋಲ್ಗೆಟ್-ಪಾಮೊಲಿವ್ (ಇಂಡಿಯಾ) ಲಿ. ವಿದ್ಯಾರ್ಥಿವೇತನ ಘೋಷಿಸಿದೆ. ಇದರಲ್ಲಿ ಹತ್ತನೇ ತರಗತಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಿ ಆ ಮೂಲಕ ತಮ್ಮ ಆಯ್ಕೆಯ ವೃತ್ತಿಜೀವನವನ್ನು ಪಡೆಯಲು ಆರ್ಥಿಕ ನೆರವು ನೀಡಲಾಗುತ್ತದೆ.

 ಅರ್ಹತೆ: 2019ರ ಮಂಡಳಿ ಪರೀಕ್ಷೆಯಲ್ಲಿ 10ನೇ ತರಗತಿಯಲ್ಲಿ ಕನಿಷ್ಠ ಶೇ.75 ಅಥವಾ 12ನೇ ತರಗತಿಯಲ್ಲಿ ಶೇ.60 ಅಂಕಗಳಿಂದ ತೇರ್ಗಡೆಗೊಂಡ 3 ವರ್ಷಗಳ ಪದವಿ, 4 ವರ್ಷಗಳ ಇಂಜಿನಿಯರಿಂಗ್, ಡಿಪ್ಲೊಮಾ ಮತ್ತು ಒಂದು ವರ್ಷದ ವೃತ್ತಿಪರ ಕೋರ್ಸ್ ಗಳನ್ನು ಸೇರಲು ಬಯಸುವ ಮತ್ತು ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ರೂ.ಗೂ ಕಡಿಮೆಯಿರುವ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.

ನೆರವು: ಆಯ್ದ ವಿದ್ಯಾರ್ಥಿಗಳು ಅವರ ಸದ್ಯದ ಶಿಕ್ಷಣ ಶ್ರೇಣಿಯನ್ನು ಅವಲಂಬಿಸಿ ನಾಲ್ಕು ವರ್ಷಗಳವರೆಗೆ ವಾರ್ಷಿಕ 30,000ರೂ.ವರೆಗೆ ನಗದು ನೆರವು ಪಡೆಯಬಹುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 30, 2019

ಅರ್ಜಿ: buddy4studyಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/COS1

*******************

ವಿದ್ಯಾರ್ಥಿವೇತನ

(ಸಂಶೋಧನೆ ಮಟ್ಟ):

ಮಕ್ಕಳ ಹಕ್ಕು ಸಂಶೋಧನಾ ಶಿಷ್ಯವೇತನ 2019

ವಿವರ: ಚೈಲ್ಡ್ ರೈಟ್ಸ್ ಆ್ಯಂಡ್ ಯು (ಸಿಆರ್‌ವೈ) ತನ್ನ ಈ ವರ್ಷದ ಮಕ್ಕಳ ಹಕ್ಕುಗಳ ಶಿಷ್ಯವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಸಮರ್ಥ ಮಕ್ಕಳ ಹಕ್ಕುಗಳ ಹೋರಾಟಗಾರರ ಸಮುದಾಯವನ್ನು ನಿರ್ಮಿಸುವುದು ಮತ್ತು ಆರ್ಥಿಕ ನೆರವು ನೀಡುವುದು ಈ ಶಿಷ್ಯವೇತನದ ಉದ್ದೇಶವಾಗಿದೆ. ಆಯ್ದ ಅಭ್ಯರ್ಥಿಗಳಿಗೆ ಒಂದು ವರ್ಷದ ಶಿಷ್ಯವೇತನ ಕಾರ್ಯಕ್ರಮಕ್ಕೆ ನೆರವು ನೀಡಲಾಗುವುದು.

ಅರ್ಹತೆ: ತಮ್ಮ ಒಂದು ವರ್ಷವನ್ನು ಮಕ್ಕಳ ಹಕ್ಕುಗಳ ಹೋರಾಟ ಕ್ಷೇತ್ರದಲ್ಲಿ ಸಂಶೋಧನೆಗೆ ಮೀಸಲಿಡಲು ಆಸಕ್ತಿ ಹೊಂದಿರುವ 18 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕರು ಅರ್ಜಿ ಹಾಕಬಹುದು.

ನೆರವು: ಆಯ್ದ ಅಭ್ಯರ್ಥಿಗಳಿಗೆ ಒಂದು ವರ್ಷದ ಶಿಷ್ಯವೇತನ ಸಂಶೋಧನಾ ಯೋಜನೆಗಾಗಿ ರೂ. 50,000ದಿಂದ 1 ಲಕ್ಷ ರೂ. ವರೆಗೆ ಧನ ಸಹಾಯ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 20, 2019

ಅರ್ಜಿ: ಆನ್‌ಲೈನ್ ಆಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಜಾಲತಾಣ: http://www.b4s.in/bharati/ CCR2

**************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ಶ್ವಾರ್ಝ್‌ಮ್ಯಾನ್ ಸ್ಕೋಲರ್ಸ್ ಪ್ರೊಗ್ರಾಂ 2019

ವಿವರ: ಬೀಜಿಂಗ್‌ನ ಸಿಂಗ್ವಾ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಪದವಿ ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಅವಕಾಶ ಕಲ್ಪಿಸಲಿದೆ. ಶ್ವಾರ್ಝ್‌ಮ್ಯಾನ್ ಸ್ಕಾಲರ್ಸ್ ಕಾರ್ಯಕ್ರಮ, ಯುವ ನಾಯಕರನ್ನು ಸಿದ್ಧಪಡಿಸುವ ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಚೀನಾ ಮತ್ತು ಭಾರತದ ನಡುವಿನ ಶೈಕ್ಷಣಿಕ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ.

ಅರ್ಹತೆ: ಪದವಿಪೂರ್ವ ಶಿಕ್ಷಣ ಮುಗಿಸಿದ್ದು ಐಇಎಲ್‌ಟಿಎಸ್, ಟಿಒಇಎಫ್‌ಎಲ್ ಅಥವಾ ಟಿಒಇಎಫ್‌ಎಲ್ ಐಬಿಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ 18ರಿಂದ 29 ವರ್ಷದ ಒಳಗಿನ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.

ನೆರವು: ಆಯ್ದ ವಿದ್ಯಾರ್ಥಿಗಳು ಸಿಂಗ್ವಾ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ಟ್ಯೂಶನ್ ಶುಲ್ಕ, ವಾಸಸ್ಥಳ, ಪ್ರಯಾಣ, ಆರೋಗ್ಯ ವಿಮೆ, ಅಧ್ಯಯನ ಸಾಧನಗಳು, ವೈಯಕ್ತಿಕ ವೆಚ್ಚ ಇತ್ಯಾದಿಗಳನ್ನು ಭರಿಸಲು ಧನ ಸಹಾಯ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 30, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/SSR8

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News