​ಎನ್‌ಆರ್‌ಸಿಯಲ್ಲಿ ಭಾಗಿಯಾದ ಅಸ್ಸಾಂ ನಾಗರಿಕರ ಸಂಪೂರ್ಣ ಪಟ್ಟಿ ಅಂತರ್ಜಾಲದಲ್ಲಿ ಪ್ರಕಟ

Update: 2019-09-14 07:25 GMT

ಗುವಾಹಟಿ, ಸೆ.14:ಅಸ್ಸಾಂ ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ಸಂಪೂರ್ಣ ತೊಡೆದುಹಾಕಲು ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲ 3.30 ಕೋಟಿ ಜನರ ವೈಯಕ್ತಿಕ ಸ್ಥಾನಮಾನವನ್ನು ಇಂದು ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.

ಆಗಸ್ಟ್ 31 ರಂದು ಎನ್‌ಆರ್‌ಸಿ ಪಟ್ಟಿ ಬಿಡುಗಡೆಯಾದ ಬಳಿಕ ಹೊರ ಬರುತ್ತಿರುವ ಹೊಸ ಪಟ್ಟಿಯಲ್ಲಿ ಪೌರತ್ವವನ್ನು ಸ್ವೀಕರಿಸಿದವರು, ತಿರಸ್ಕೃರಿಸಲ್ಟಟ್ಟವರು ಹಾಗೂ ಮೇಲ್ಮನವಿ ವಿಚಾರಣೆ ಬಾಕಿ ಇರುವವರು ಇದ್ದಾರೆ. ಹೊಸ ಪಟ್ಟಿಯ ಮುಖಾಂತರ ವ್ಯಕ್ತಿಯೊಬ್ಬನಿಗೆ ತನ್ನ ಕುಟುಂಬ ಸದಸ್ಯರ ಸ್ಥಾನಮಾನವನ್ನು ಪರಿಶೀಲಿಸಬಹುದು.

ಆಗಸ್ಟ್ 31 ರಂದು ಬಿಡುಗಡೆ ಮಾಡಲಾಗಿರುವ ಎನ್‌ಆರ್‌ಸಿ ಪಟ್ಟಿಯಲ್ಲಿ 19 ಲಕ್ಷಕ್ಕೂ ಅಧಿಕ ನಾಗರಿಕರನ್ನು ಹೊರಗಿಡಲಾಗಿತ್ತು. ಪಟ್ಟಿಯಿಂದ ಹೊರಗುಳಿದವರು ಮುಂದಿನ ಕೆಲವು ತಿಂಗಳುಗಳಲ್ಲಿ ವಿದೇಶಿಯರ ನ್ಯಾಯಮಂಡಳಿಗಳ ಮೂಲಕ ತಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗಿದೆ. ಮತ್ತೊಂದು ಸುತ್ತಿನ ಕಾನೂನು ಪರಿಶೀಲನೆಯಲ್ಲಿ ಉಳಿದುಕೊಳ್ಳುವವರು ದೇಶದಲ್ಲಿ ನಿಲ್ಲಲು ಅವಕಾಶ ನೀಡಲಾಗುತ್ತದೆ. ಉಳಿದುಕೊಳ್ಳದೇ ಇರುವವರನ್ನು ಅಸ್ಸಾಂನ ಗೋಲಾಪಾರ ಜಿಲ್ಲೆಯಲ್ಲಿರುವ ದೇಶದ ಮೊತ್ತ ಮೊದಲ ಸುಸಜ್ಜಿತ ಬಂಧನ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News