ಸಾಲೂರು ಮಠದಿಂದ ಕಸಾಯಿ ಖಾನೆಗೆ ಅಕ್ರಮ ಜಾನುವಾರು ಸಾಗಾಟ: ಆರೋಪಿ ಸೆರೆ

Update: 2019-09-14 10:13 GMT

ಚಾಮರಾಜನಗರ: ಕಳೆದ ವರ್ಷ ಡಿಸೆಂಬರ್ ನಲ್ಲಿ ವಿಷ ಮಿಶ್ರಿತ ಪ್ರಸಾದ ಪ್ರಕರಣದಲ್ಲಿ ಸುದ್ದಿಯಾಗಿದ್ದ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದು, ಭಕ್ತರು ಮಠಕ್ಕೆ ನೀಡುವ ಜಾನುವಾರುಗಳನ್ನು ಕಸಾಯಿ ಖಾನೆಗೆ ಸಾಗಿಸುವ ದಂಧೆಯಲ್ಲಿ ತೊಡಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಶುಕ್ರವಾರ ರಾತ್ರಿ ಸಾಲೂರು ಮಠದಿಂದ ತಮಿಳುನಾಡಿಗೆ ಸೇರಿದ ಲಾರಿಯಲ್ಲಿ 16 ಹಸುಗಳನ್ನು ತುಂಬಿ ಸಾಗಿಸುವ ವೇಳೆ ಸ್ಥಳೀಯರು ಲಾರಿಯನ್ನು ಅಡ್ಡಗಟ್ಟಿ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಯನ್ನು ಹನೂರು ಪುದೂರು ಗ್ರಾಮದ ಲಾರಿ ಚಾಲಕ ಮಹಾಲಿಂಗ ಎಂದು  ತಿಳಿದುಬಂದಿದೆ.

ಜಾನುವಾರುಗಳನ್ನು ಖಾಸಾಯಿಖಾನೆಗೆ ಸಾಗಿಸುತ್ತಿದ್ದ ಲಾರಿ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಮಹದೇಶ್ವರಬೆಟ್ಟದ ಪೋಲಿಸ್ ಠಾಣಾಧಿಕಾರಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News