ಅಗತ್ಯಬಿದ್ದರೆ ಜಮ್ಮು–ಕಾಶ್ಮೀರಕ್ಕೆ ಹೋಗುತ್ತೇನೆ: ಸಿಜೆಐ ರಂಜನ್ ಗೊಗೊಯಿ

Update: 2019-09-16 07:26 GMT

ಹೊಸದಿಲ್ಲಿ, ಸೆ.16:  ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಗೆ ಮೊರೆ ಹೋಗುವುದು ಕಷ್ಟಕರವಾಗಿದೆ ಎಂದು ಮಕ್ಕಳ ಹಕ್ಕು ಕಾರ್ಯಕರ್ತೆಯೊಬ್ಬರು ಮಾಡಿರುವ ಆರೋಪಗಳು ನಿಜವೇ ಎಂದು ಪರಾಮರ್ಶಿಸಲು ಅಗತ್ಯ ಬಿದ್ದರೆ ತಾನು  ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ  ಅಲ್ಲಿನ ಭಾಗಶಃ ನಿರ್ಬಂಧಗಳಿಂದಾಗಿ ಆರರಿಂದ 18 ವರ್ಷದೊಳಗಿನ ಮಕ್ಕಳು ಹಾಗೂ ಹದಿಹರೆಯದವರು ಕಷ್ಟಕರ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆಂದು ಆರೋಪಿಸಿ ಮಕ್ಕಳ ಹಕ್ಕು ಕಾರ್ಯಕರ್ತೆ ಏನಾಕ್ಷಿ ಗಂಗೂಲಿ ಅವರು ಸಲ್ಲಿಸಿದ್ದ ಅಪೀಲಿನ ಮೇಲಿನ ವಿಚಾರಣೆ ಸಂದರ್ಭ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಗೊಗೊಯಿ ಈ ವಿಚಾರವನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿನಲ್ಲಿ ಎತ್ತಬೇಕೆಂದು ಹೇಳಿದ್ದರು.

ಇದಕ್ಕೆ ಉತ್ತರಿಸಿದ ಗಂಗೂಲಿ “ಹೈಕೋರ್ಟಿಗೆ ಮೊರೆ ಹೋಗುವುದು ಕಷ್ಟಕರವಾಗಿ ಬಿಟ್ಟಿದೆ'' ಎಂದರು. ಆಗ ಗೊಗೊಯಿ, “ಅದೇಕೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿಗೆ ಹೋಗುವುದು ಕಷ್ಟಕರವಾಗಿದೆ ?, ಯಾರಾದರೂ ಅಡ್ಡಿಯಾಗಿದ್ದಾರೆಯೇ ?, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಿಂದ ನಮಗೆ ತಿಳಿಯಬೇಕು, ಅಗತ್ಯ ಬಿದ್ದರೆ ನಾನೇ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿಗೆ ಹೋಗುತ್ತೇನೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News