ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ ತಂದೆ ನಿಧನ

Update: 2019-09-16 11:34 GMT

ಮಡಿಕೇರಿ, ಸೆ.16: ಬಹುಭಾಷಾ ನಟಿ ಕೊಡಗಿನ ಹರ್ಷಿಕಾ ಪೂಣಚ್ಚ ಅವರ ತಂದೆ ಉದ್ದಪಂಡ ಬಿ. ಪೂಣಚ್ಚ(74) ಅವರು ಇಂದು ಹೃದಯಘಾತದಿಂದ ವೀರಾಜಪೇಟೆ ತಾಲೂಕಿನ ಕೊಮ್ಮೆತ್ತೋಡು ಗ್ರಾಮದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಉದ್ದಪಂಡ ಬಿ. ಪೂಣಚ್ಚ ಅವರು ಹೃದಯ ಸಂಬಂಧಿ ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದರು.

ಮೃತರ ಅಂತ್ಯ ಸಂಸ್ಕಾರದಲ್ಲಿ ಬಿಗ್‍ಬಾಸ್ ಖ್ಯಾತಿಯ ನಟ ಭುವನ್ ಪೊನ್ನಣ್ಣ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರುಗಳಾದ ಯು.ಎಂ.ಪೂವಯ್ಯ, ಡಾಟಿ ಪೂವಯ್ಯ, ವಿರಾಜಪೇಟೆ ತಾ.ಪಂ. ಅಧ್ಯಕ್ಷ ಸ್ಮಿತಾ ಪ್ರಕಾಶ್ ಮೊದಲಾದವರು ಪಾಲ್ಗೊಂಡಿದ್ದರು. 

ಮೃತ ಪೂಣಚ್ಚ ಅವರು ಪತ್ನಿ ಶಾಂಭವಿ, ಪುತ್ರಿ ಹರ್ಷಿಕಾ ಪೂಣಚ್ಚ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News