ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಕೋಟ ಪೂಜಾರಿಗೆ ದ.ಕ, ಬಿಎಸ್​ವೈಗೆ ಬೆಂಗಳೂರಿನ ಹೊಣೆ

Update: 2019-09-16 13:25 GMT

ಬೆಂಗಳೂರು, ಸೆ.16: ಕೊನೆಗೂ ರಾಜ್ಯದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆ, ಗೃಹ ಸಚಿವ ಬಸವರಾಜ ಬೊಮ್ಮಾಯಿಯನ್ನು ಉಡುಪಿ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಹೊಣೆ ಬಿ.ಎಸ್. ಯಡಿಯೂರಪ್ಪ ಬಳಿ ಉಳಿದುಕೊಂಡಿದೆ.

ನೂತನ ಉಸ್ತುವಾರಿ ಸಚಿವರ ವಿವರ: 

ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ-ಬಾಗಲಕೋಟೆ/ ಕಲಬುರ್ಗಿ(ಹೆಚ್ಚುವರಿ) ಡಾ.ಅಶ್ವಥ್ ನಾರಾಯಣ್-ರಾಮನಗರ/ಚಿಕ್ಕಬಳ್ಳಾಪುರ(ಹೆಚ್ಚುವರಿ), ಲಕ್ಷ್ಮಣ್ ಸವದಿ-ಬಳ್ಳಾರಿ/ಕೊಪ್ಪಳ(ಹೆಚ್ಚುವರಿ), ಕೆ.ಎಸ್.ಈಶ್ವರಪ್ಪ-ಶಿವಮೊಗ್ಗ/ದಾವಣಗೆರೆ (ಹೆಚ್ಚುವರಿ), ಆರ್.ಅಶೋಕ್-ಬೆಂಗಳೂರು ಗ್ರಾಮಾಂತರ/ಮಂಡ್ಯ(ಹೆಚ್ಚುವರಿ), ಜಗದೀಶ್ ಶೆಟ್ಟರ್-ಬೆಳಗಾವಿ/ಹುಬ್ಬಳ್ಳಿ ಧಾರವಾಡ(ಹೆಚ್ಚುವರಿ).

ಬಿ.ಶ್ರೀರಾಮುಲು-ರಾಯಚೂರು/ಚಿತ್ರದುರ್ಗ(ಹೆಚ್ಚುವರಿ), ಎಸ್.ಸುರೇಶ್ ಕುಮಾರ್-ಚಾಮರಾಜನಗರ, ವಿ.ಸೋಮಣ್ಣ- ಮೈಸೂರು/ಕೊಡಗು(ಹೆಚ್ಚುವರಿ), ಸಿ.ಟಿ.ರವಿ-ಚಿಕ್ಕಮಗಳೂರು, ಬಸವರಾಜ ಬೊಮ್ಮಾಯಿ-ಉಡುಪಿ/ಹಾವೇರಿ (ಹೆಚ್ಚುವರಿ).

ಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ, ಜೆ.ಸಿ.ಮಾಧುಸ್ವಾಮಿ- ತುಮಕೂರು/ಹಾಸನ (ಹೆಚ್ಚುವರಿ), ಸಿ.ಸಿ.ಪಾಟೀಲ್-ಗದಗ/ವಿಜಯಪುರ (ಹೆಚ್ಚುವರಿ), ಎಚ್.ನಾಗೇಶ್-ಕೋಲಾರ, ಪ್ರಭು ಚೌವ್ಹಾಣ್-ಬೀದರ್/ಯಾದಗಿರಿ(ಹೆಚ್ಚುವರಿ), ಶಶಿಕಲಾ ಜೊಲ್ಲೆ-ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News