ಭಾರತದಲ್ಲಿ ಪೆಟ್ರೋಲ್ ಬೆಲೆ 80 ರೂ. ದಾಟುವ ಸಾಧ್ಯತೆ ?

Update: 2019-09-17 05:03 GMT

ಹೊಸದಿಲ್ಲಿ, ಸೆ.17: ಸೌದಿ ಅರೇಬಿಯಾದ ಕಚ್ಚಾ ತೈಲ ಘಟಕಗಳ ಮೇಲೆ ಹೌಥಿ ಬಂಡುಕೋರರು ನಡೆಸಿದ್ದಾರೆ ಎನ್ನಲಾದ ಡ್ರೋನ್ ದಾಳಿಯ ಬಳಿಕ ಜಗತ್ತಿನಾದ್ಯಂತ ತೈಲ ಬೆಲೆ ಏರಿಕೆಯಾಗಿದೆ. ಜಗತ್ತಿನ ಎರಡನೇ ಅತಿದೊಡ್ಡ ತೈಲ ಆಮದು ರಾಷ್ಟ್ರವಾಗಿರುವ ಭಾರತಕ್ಕೆ ಇದರಿಂದ ದೊಡ್ಡ ಪೆಟ್ಟು ಬಿದ್ದಿದೆ. ಭಾರತದ ಆರ್ಥಿಕತೆಯ ಮೇಲೆ ಹೊಡೆತ ಉಂಟಾಗಿದೆ. ಇದರಿಂದ ಪೆಟ್ರೋಲ್ ದರ 80 ರೂ. ದಾಟುವ ಸಾಧ್ಯತೆ ಕಂಡು ಬಂದಿದೆ.

ಕಚ್ಚಾ ತೈಲ ದರದಲ್ಲಿ ಭಾರಿ ಏರಿಕೆ ಕಂಡುಬಂದ ಬೆನ್ನಲ್ಲೇ ಇಂದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲು ಪ್ರಾರಂಭಿಸಿತು. ಪೆಟ್ರೋಲ್ ಬೆಲೆ 18 ಪೈಸೆ ಮತ್ತು ಡೀಸೆಲ್ ಬೆಲೆ 33 ಪೈಸೆ ಹೆಚ್ಚಾಗಿದೆ.

ಒಂದು ಲೀಟರ್ ಪೆಟ್ರೋಲ್ ದಿಲ್ಲಿ ಯಲ್ಲಿ ರೂ.  77.21, ಮುಂಬೈನಲ್ಲಿ ರೂ.77.83, ಹೈದರಾಬಾದ್ನಲ್ಲಿ ರೂ. 76.69, ಬೆಂಗಳೂರಿನಲ್ಲಿ ರೂ.74.61 ಮತ್ತು ಚೆನ್ನೈನಲ್ಲಿ ರೂ. 74.97. ಅದೇ ರೀತಿ ಡೀಸೆಲ್ ದಿಲ್ಲಿಯಲ್ಲಿ ರೂ.  65.61, ಮುಂಬೈನಲ್ಲಿ ರೂ. 68.76, ಹೈದರಾಬಾದ್ನಲ್ಲಿ  ರೂ. 71.46, ಬೆಂಗಳೂರಿನಲ್ಲಿ ರೂ.67.79 ಮತ್ತು ಚೆನ್ನೈನಲ್ಲಿ ರೂ. 69.29  ದರ  ಇದೆ.

ಪ್ರಸಕ್ತ ಮಟ್ಟದಲ್ಲಿ ಕಚ್ಚಾ ಬೆಲೆ ಮುಂದುವರಿದರೆ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಬಹುದು ಎಂದು ಎಚ್‌ಪಿಸಿಎಲ್ ಅಧ್ಯಕ್ಷ ಎಂ ಕೆ ಸುರಾನಾ ನಿನ್ನೆ ಹೇಳಿದ್ದಾರೆ.

ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ರಾಜ್ಯದ ತೈಲ ಚಿಲ್ಲರೆ ವ್ಯಾಪಾರಿಗಳು ನಿಗದಿಪಡಿಸುತ್ತಾರೆ, ಕಳೆದ 15 ದಿನಗಳ ಸರಾಸರಿ ಪೆಟ್ರೋಲ್ ಮತ್ತು ಡೀಸೆಲ್ ಬೆಂಚ್ಮಾರ್ಕ್ ಬೆಲೆಯ ಆಧಾರದ ಮೇಲೆ ಡಾಲರ್ ವಿರುದ್ಧದ ರೂಪಾಯಿ ವಿನಿಮಯ ದರವನ್ನು ನಿಗದಿಪಡಿಸಲಾಗಿದೆ. ಭಾರತವು ತನ್ನ ಕಚ್ಚಾ ತೈಲ ಅವಶ್ಯಕತೆಗಳನ್ನು ಸುಮಾರು 70%ರಷ್ಟು  ಆಮದು ಮಾಡಿಕೊಳ್ಳುವುದರಿಂದ ತೈಲ ಬೆಲೆ ದುಬಾರಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News