ಮನೆ ಗೋಡೆ ಕುಸಿದು 4 ವರ್ಷದ ಮಗು ಸಾವು, ತಾಯಿಗೆ ಗಾಯ

Update: 2019-09-17 12:27 GMT

ಚಾಮರಾಜನಗರ, ಸೆ.17: ಮನೆ ಗೋಡೆ ಕುಸಿದ ಪರಿಣಾಮ ಗೋಡೆಯಡಿ ಸಿಲುಕಿ ಮಗು ಮೃತಪಟ್ಟು, ತಾಯಿ ಗಾಯಗೊಂಡ ಘಟನೆ ತಾಲೂಕಿನ ದೇಶಿಗೌಡನಪುರ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

ಗ್ರಾಮದ ಮಲ್ಲೇಶ್ ಅವರ ಮಗು ವೀರಭದ್ರಸ್ವಾಮಿ(4) ಮೃತಪಟ್ಟಿದ್ದು, ಪತ್ನಿ ಚೆನ್ನಾಜಮ್ಮ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ಸುರಿದ ಮಳೆಗೆ ಮಲ್ಲೇಶ್ ಹಳೆ ಮನೆ ಗೋಡೆ ನೆನೆದಿತ್ತು. ಬೆಳಗಿನ ಜಾವ 4.30ರ ಸುಮಾರಿನಲ್ಲಿ ಗೋಡೆ ಕುಸಿದು ಮಲಗಿದ್ದ ತಾಯಿ, ಮಗು ಮೇಲೆ ಬಿದ್ದಿದೆ. ಗೋಡೆಯಡಿ ಸಿಲುಕಿದ ಮಗು ಮೃತಪಟ್ಟರೆ, ತಾಯಿ ಗಾಯಗೊಂಡಿದ್ದು, ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ರಾಮಸಮುದ್ರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News