ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗ: ಜೈಶಂಕರ್

Update: 2019-09-17 17:43 GMT

ಹೊಸದಿಲ್ಲಿ, ಸೆ. 17: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಯಾವಾಗಲೂ ಭಾರತದ ಭಾಗ. ಭಾರತ ಒಂದು ದಿನ ಅದರ ಮೇಲೆ ನ್ಯಾಯಬದ್ಧ ಅಧಿಕಾರ ಸ್ಥಾಪಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಂಗಳವಾರ ಹೇಳಿದ್ದಾರೆ. ‘‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿತ್ತು ಹಾಗೂ ಮುಂದೆ ಕೂಡ ಸ್ಪಷ್ಟವಾಗಿ ಇರಲಿದೆ’’ ಎಂದು ಜೈಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುತ್ತಿರುವ ಬಗ್ಗೆ ಅವರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು. ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂದೆ ತೆಗೆದುಕೊಂಡಿರುವುದು ಆಂತರಿಕ ವಿಚಾರ. ಈಗ ಚರ್ಚೆ ನಡೆಸಬೇಕಾಗಿರುವುದು ಪಾಕಿಸ್ತಾನದ ಗಡಿಯಾಚೆಯಿಂದ ನಡೆಸುತ್ತಿರುವ ಭಯೋತ್ಪಾದನೆ ಬಗ್ಗೆ ಎಂದು ಜೈಶಂಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News