ಹನೂರು: ಪ್ರಾಥಮಿಕ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ

Update: 2019-09-18 18:35 GMT

ಹನೂರು, ಸೆ.18: ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಇತರೆ ರೈತರಿಗೂ ಹಣದ ಸಹಾಯ ಲಭಿಸಿದಂತಾಗುತ್ತದೆ ಎಂದು ಸೂಳೇರಿಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀ ಎ.ಎಂ.ಮಹಾದೇವಪ್ರಸಾದ್ ಹೇಳಿದರು.

ಹನೂರು ತಾಲೂಕಿನ ಸೂಳೇರಿಪಾಳ್ಯ ಪ್ರಾಥಮಿಕ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, 2018-19 ನೇ ಸಾಲಿನಲ್ಲಿ ಸರ್ಕಾರದ ವತಿಯಿಂದ 166 ಸದಸ್ಯರಿಗೆ 97,33,000 ರೂ. ಸಾಲ ಮನ್ನಾ ಆಗಿದೆ. ಇನ್ನೂ 60 ಸದಸ್ಯರು ಸಾಲ ಕೇಳಿದ್ದು, ಸರ್ಕಾರದ ವತಿಯಿಂದ ಹಣ ಬಂದಲ್ಲಿ ಸಾಲ ನೀಡಲಾಗುವುದು ಎಂದು ಹೇಳಿದರು.

ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಇತರೆ ರೈತರಿಗೂ ಹಣದ ಸಹಾಯ ಲಭಿಸಿದಂತಾಗುತ್ತದೆ ಮತ್ತು ಸರ್ಕಾರದ ವತಿಯಿಂದ ಎಲ್ಲಾ ಸೌಲಭ್ಯಗಳೂ ಸಿಗುತ್ತವೆ ಎಂದು ಹೇಳಿದರು. 

ಈ ಸಂದರ್ಭ ಸೂಳೇರಿಪಾಳ್ಯ ಪ್ರಾಥಮಿಕ ಸಹಕಾರ ಸಂಘದ ಉಪಾಧ್ಯಕ್ಷ ರಂಗರಾಜರಸು, ನಿರ್ದೇಶಕರಾದ ಗೌಸ್‍ಫೀರ್, ಮಲ್ಲೇಗೌಡ, ಮುತ್ತೇಗೌಡ ಹಾಗು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇರ್ಷಾದ್ ಅಹಮ್ಮದ್ ಷರೀಫ್, ನವೀದ್, ಸೇರಿ ಹಲವರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News