ಹನೂರು: ಸಸಿ ನೆಡುವ ಮೂಲಕ ವೃಕ್ಷೋತ್ಸವ ಕಾರ್ಯಕ್ರಮಕ್ಕೆ ಚಾಲನೆ

Update: 2019-09-18 18:40 GMT

ಹನೂರು, ಸೆ.18: ಪ್ರತೀ ಮಕ್ಕಳು ತಮ್ಮ ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ರಕ್ಷಣೆ ಮತ್ತು ವನ್ಯಜೀವಿ ರಕ್ಷಣೆಯ ಮಾಡುವ ಕೆಲಸವನ್ನು ಮೈಗೂಡಿಸಿಕೂಳ್ಳಬೇಕು ಎಂದು ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಡಿಎಫ್‍ಓ ಏಡುಕೂಂಡಲು ತಿಳಿಸಿದರು.

ಹನೂರು ಸಮೀಪದ ಮಂಗಲ ಸರ್ಕಾರಿ ಪ್ರೌಡಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ವೃಕ್ಷೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರ ರಕ್ಷಣೆ ಕಾಯಕವನ್ನು ತಮ್ಮ ಬಾಲ್ಯದಿಂದಲೇ ರೂಡಿಸಿಕೊಳ್ಳಬೇಕು. ಜೊತೆಗೆ ತಮ್ಮ ಪೋಷಕರು, ತಮ್ಮ ಮನೆಯ ನೆರೆ ಹೊರೆಯವರಿಗೆ ಪರಿಸರ, ವನ್ಯಜೀವಿ ರಕ್ಷಣೆ ಕುರಿತು ಕಾಳಜಿ ಮೂಡಿಸಬೇಕು ಎಂದು ಹೇಳಿದರು.

ಈ ಸಂದರ್ಭ ಆರ್‍ಎಫ್‍ಒ ಸುಂದರ್, ಉಪ ಅರಣ್ಯಾ ಇಲಾಖಾಧಿಕಾರಿ ಸಾಲನ್, ಅರಣ್ಯಾ ಇಲಾಖೆ ಸಿಬ್ಬಂದಿಗಳಾದ ಪ್ರಸಾದ್, ತೀರ್ಥಪ್ರಸಾದ್ ಹಾಗೂ ಶಾಲೆಯ ಶಿಕ್ಷಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News