ಕೆಪಿಸಿಸಿಗೆ ನೂತನವಾಗಿ 34 ವಕ್ತಾರರ ನೇಮಕ

Update: 2019-09-19 12:10 GMT

ಬೆಂಗಳೂರು, ಸೆ.19: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಗೆ ನೂತನವಾಗಿ 34 ಮಂದಿ ವಕ್ತಾರರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಮಾಜಿ ಸಭಾಪತಿಗಳಾದ ಡಾ.ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ರಾಜ್ಯ ಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ, ಯು.ಟಿ.ಖಾದರ್, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ, ಶಾಸಕರಾದ ಎನ್.ಎ.ಹಾರೀಸ್, ಲಕ್ಷ್ಮಿ ಹೆಬ್ಬಾಳ್ಕರ್.

ಮಾಜಿ ಸಚಿವ ತನ್ವೀರ್ ಸೇಠ್, ಶಾಸಕಿ ಸೌಮ್ಯಾರೆಡ್ಡಿ, ಬಿ.ನಾರಾಯಣರಾವ್, ಶಾಸಕ ಎಚ್.ಡಿ.ರಂಗನಾಥ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯರಾದ ರಿಝ್ವನ್ ಅರ್ಶದ್, ಪಿ.ಆರ್.ರಮೇಶ್, ನಾರಾಯಣಸ್ವಾಮಿ, ಧರ್ಮಸೇನ್, ಐವಾನ್ ಡಿ’ಸೋಜಾ, ಪ್ರಕಾಶ್ ರಾಥೋಡ್, ಶರಣಪ್ಪ ಮಟ್ಟೂರು, ಕೆ.ಹರೀಶ್‌ ಕುಮಾರ್.

ಮಾಜಿ ಸಂಸದ ಆರ್.ಧ್ರುವನಾರಾಯಣ್, ಕೆ.ದಿವಾಕರ್, ಮಂಜುಳಾ ಮಾನಸ, ಮಾಜಿ ಮೇಯರ್ ಜೆ.ಹುಚ್ಚಪ್ಪ, ನಾಗರಾಜ್ ಯಾದವ್, ಎಐಸಿಸಿ ಸದಸ್ಯ ಸೂರಜ್ ಹೆಗ್ಡೆ, ಕವಿತಾ ರೆಡ್ಡಿ, ಮಾಜಿ ಶಾಸಕ ಎಸ್.ಜಿ.ನಂಜಯ್ಯನ ಮಠ್, ಮಾಜಿ ಐಪಿಎಸ್ ಅಧಿಕಾರಿ ಎನ್.ಶಿವಪ್ರಸಾದ್, ನಿವೇದಿತಾ ಆಳ್ವಾ, ಮುರಳೀಧರ್ ಹಾಲಪ್ಪ ಹಾಗೂ ಲಕ್ಷ್ಮಣ್ ಎಂಬವರನ್ನು ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News