ಗೆಳೆಯರ ಜೊತೆ ಪಬ್‍ ಜಿಯಲ್ಲಿ ಸೋತು ಚರಂಡಿಯಲ್ಲಿ ಈಜಿದ ಯುವಕ!

Update: 2019-09-20 11:21 GMT

ಬೆಳಗಾವಿ, ಸೆ.20: ವಿಜಯನಗರದ ಯುವಕನೊಬ್ಬ ಪಬ್‍ ಜಿ ಗೇಮ್ ‍ನಲ್ಲಿ ತನ್ನ ಸ್ನೇಹಿತನ ಜತೆ ಸೋತ ಬಳಿಕ ಚರಂಡಿಯಲ್ಲಿ ಈಜಿದ ಘಟನೆ ನಡೆದಿದೆ. ಚರಂಡಿಯಲ್ಲಿ ಯುವಕ ಈಜುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸ್ಥಳೀಯರು ಈ ಯುವಕನನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಬ್‍ ಜಿ ಆಟದಲ್ಲಿ ಸೋತ ಬಳಿಕ ಯುವಕ ತನ್ನ ಜೀವ ಪಣಕ್ಕಿಟ್ಟು ಚರಂಡಿಯಲ್ಲಿ ಈಜಿದ್ದಾನೆ.

ಯುವಕನ ಸ್ನೇಹಿತರು ಹೇಳುವಂತೆ ಆತ ಗೇಮ್ ಗೆಲ್ಲುವ ವಿಶ್ವಾಸ ಹೊಂದಿದ್ದ. ಆದರೆ ಸೋತ ಬಳಿಕ, ಚರಂಡಿ ಈಜುವ ಪಂಥಾಹ್ವಾನ ಸ್ವೀಕರಿಸಿದ್ದಾನೆ. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಬೆಳಗಾವಿಯಲ್ಲಿ ಪೋಷಕರು ಪ್ರತಿಭಟನೆ ನಡೆಸಿ, ಈ ಆನ್ ಲೈನ್ ಗೇಮ್ ನಿಷೇಧಿಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News