ಪಾಕ್ ಮಾನವಹಕ್ಕು ಕಾರ್ಯಕರ್ತೆ ಅಮೆರಿಕಕ್ಕೆ ಪರಾರಿ

Update: 2019-09-20 18:06 GMT

ನ್ಯೂಯಾರ್ಕ್, ಸೆ. 20: ಪಾಕಿಸ್ತಾನದ ಮಾನವಹಕ್ಕುಗಳ ಹೋರಾಟಗಾರ್ತಿ ಗುಲಲಾಯಿ ಇಸ್ಮಾಯೀಲ್ ಪಾಕಿಸ್ತಾನದಿಂದ ಅಮೆರಿಕಕ್ಕೆ ಪರಾರಿಯಾಗಿದ್ದಾರೆ ಹಾಗೂ ಅಮೆರಿಕದಲ್ಲಿ ಅವರು ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

32 ವರ್ಷದ ಹೋರಾಟಗಾರ್ತಿ ಈಗ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ತನ್ನ ಸಹೋದರಿ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಗುರುವಾರ ವರದಿ ಮಾಡಿದೆ ಎಂದು ಪಾಕಿಸ್ತಾನದ ‘ಡಾನ್ ನ್ಯೂಸ್’ ವರದಿ ಮಾಡಿದೆ.

ಪಾಕಿಸ್ತಾನದಿಂದ ನಾನು ಹೇಗೆ ಹೊರಬಂದೆ ಎನ್ನುವುದನ್ನು ಗುಲಾಲಾಯಿ ಇಸ್ಮಾಯೀಲ್ ಬಹಿರಂಗಪಡಿಸಿಲ್ಲ. ‘‘ನಾನು ಯಾವುದೇ ವಿಮಾನ ನಿಲ್ದಾಣದ ಮೂಲಕ ಅಲ್ಲಿಂದ ಹೊರಬಂದಿಲ್ಲ’’ ಎಂದಷ್ಟೇ ಅವರು ‘ನ್ಯೂಯಾರ್ಕ್ ಟೈಮ್ಸ್’ಗೆ ಹೇಳಿದರು.

‘‘ಇದಕ್ಕಿಂತ ಹೆಚ್ಚು ನಾನು ಏನೂ ಹೇಳಲು ಸಾಧ್ಯವಿಲ್ಲ. ನನ್ನ ತಪ್ಪಿಸಿಕೊಂಡ ಕತೆಯು ಹಲವರ ಜೀವಗಳನ್ನು ಅಪಾಯದಲ್ಲಿ ಸಿಲುಕಿಸಬಹುದು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News