ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-09-20 18:33 GMT

ವಿದ್ಯಾರ್ಥಿವೇತನ

(ಅರ್ಹತೆ ಮತ್ತು ಆದಾಯ ಆಧಾರಿತ):

ಮರುಬೇನಿ ಇಂಡಿಯಾ ಮೆರಿಟೋರಿಯಸ್ ಸ್ಕಾಲರ್‌ಶಿಪ್ 2019-20

ವಿವರ: ಆರ್ಥಿಕ ನೆರವಿನ ಅಗತ್ಯವಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪದವಿ ಅಧ್ಯಯನ ನಡೆಸಲು ಮರುಬೇನಿ ಇಂಡಿಯಾ ಪ್ರೈ.ಲಿ.(ಎಂಐಪಿಎಲ್) ಸ್ಕಾಲರ್‌ಶಿಪ್ ಒದಗಿಸುತ್ತಿದೆ.

ಅರ್ಹತೆ: 2018-19ರ ಸಾಲಿನಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕನಿಷ್ಟ ಶೇ.75 ಅಂಕ ಗಳಿಸಿದ ಹಾಗೂ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಪದವಿ ಅಧ್ಯಯನಕ್ಕೆ ಸೇರ್ಪಡೆಗೊಂಡಿರುವವರು ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ ವರ್ಷಕ್ಕೆ 4 ಲಕ್ಷ ರೂ. ಮೀರಿರಬಾರದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದೇ ಬಾರಿ ರೂ. 40,000 ದಿಂದ 50,000ರ ವರೆಗೆ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 25, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/MIM5

***************

ವಿದ್ಯಾರ್ಥಿವೇತನ

(ಅರ್ಹತೆ ಮತ್ತು ಆದಾಯ ಆಧಾರಿತ):

ಎಐಸಿಟಿಇ ಪಿಜಿ(ಗೇಟ್/ಜಿಪಿಎಟಿ)ಸ್ಕಾಲರ್‌ಶಿಪ್ 2019-20

 ವಿವರ: ಎಐಸಿಟಿಇ ಮತ್ತು ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆ(ಎಚ್‌ಆರ್‌ಡಿ) ತಾಂತ್ರಿಕ ವಿಷಯದಲ್ಲಿ ಸ್ನಾತಕೋತ್ತರ ಮತ್ತು ಉನ್ನತ ಅಧ್ಯಯನ ನಡೆಸಲು ಪದವಿ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುತ್ತಿದೆ. ಭಾರತದಲ್ಲಿ ತಾಂತ್ರಿಕ ಅಧ್ಯಯನಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇದನ್ನು ನೀಡಲಾಗುತ್ತದೆ.

ಅರ್ಹತೆ: 2019-20ರ ಶೈಕ್ಷಣಿಕ ವರ್ಷದಲ್ಲಿ ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಎಂಟೆಕ್, ಎಂಇ, ಎಂ ಫಾರ್ಮ, ಎಂ ಆರ್ಕ್‌ನ ಪ್ರಥಮ ವರ್ಷಕ್ಕೆ ನೋಂದಣಿ ಮಾಡಿಕೊಂಡಿರುವ, ಸೂಕ್ತ ಗೇಟ್/ಜಿಪಿಎಟಿ ಅಂಕ ಗಳಿಸಿರುವ ಭಾರತೀಯ ಪದವೀಧರರು ಅರ್ಹರು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷಾವಧಿಗೆ ಮಾಸಿಕ 12,400 ರೂ. ಸ್ಟೈಪೆಂಡ್ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 30, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/ PGA1

**************

ವಿದ್ಯಾರ್ಥಿವೇತನ

(ಅರ್ಹತೆ ಮತ್ತು ಆದಾಯ ಆಧಾರಿತ):

ಮೆರ್ಕ್ ಇಂಡಿಯಾ ಚಾರಿಟೇಬಲ್ ಟ್ರಸ್ಟ್ (ಎಂಐಸಿಟಿ)ಸ್ಕಾಲರ್‌ಶಿಪ್ 2019-20

ವಿವರ: ಬೆಂಗಳೂರು, ಮುಂಬೈ, ನವಿ ಮುಂಬೈ ಮತ್ತು ಥಾಣೆಯ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನಕ್ಕೆ ನೆರವಾಗುವ ಉದ್ದೇಶದಿಂದ ಮೆರ್ಕ್ ಇಂಡಿಯಾ ನೀಡುವ ಸ್ಕಾಲರ್‌ಶಿಪ್. ಅರ್ಹ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪೂರೈಸುವವರಿಗೆ ಸ್ಕಾಲರ್‌ಶಿಪ್ ನೆರವು ಒದಗಿಸಲಾಗುವುದು.

ಅರ್ಹತೆ: ಬೆಂಗಳೂರು, ಥಾಣೆ, ನವಿ ಮುಂಬೈ ಹಾಗೂ ಮುಂಬೈಯ ವಿದ್ಯಾರ್ಥಿಗಳು, 2018-19ರ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಕನಿಷ್ಠ ಶೇ.80 ಅಂಕ ಗಳಿಸಿರಬೇಕು. ಕುಟುಂಬದ ವಾರ್ಷಿಕ ವರಮಾನ ಎಲ್ಲಾ ಮೂಲಗಳಿಂದ ಸೇರಿ 2,40,000 ರೂ.ಗಿಂತ ಕಡಿಮೆ ಇರಬೇಕು.

 ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 35,000 ರೂ. ಸ್ಕಾಲರ್‌ಶಿಪ್ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 15, 2019

ಅರ್ಜಿ: ಆನ್‌ಲೈನ್ ಅಥವಾ ಆಫ್‌ಲೈನ್‌ಮೂಲಕ ಅರ್ಜಿ ಸಲ್ಲಿಸಬಹುದು.

ಜಾಲತಾಣ: http://www.b4s.in/bharati/MIC9

***********

ವಿದ್ಯಾರ್ಥಿವೇತನ

(ಸಂಶೋಧನೆ ಆಧಾರಿತ):

ವಾಟರ್ ಅಡ್ವಾನ್ಸ್‌ಡ್ ರಿಸರ್ಚ್ ಆ್ಯಂಡ್ ಇನೊವೇಷನ್ ಫೆಲೊಶಿಪ್ ಪ್ರೋಗ್ರಾಂ (ವಾರಿ) 2019

ವಿವರ: ಜಲವಿಜ್ಞಾನ ವಿಷಯದಲ್ಲಿ ಸಂಶೋಧನಾ ಅಧ್ಯಯನ ನಡೆಸಲು ಆಸಕ್ತಿ ಇರುವ ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳ ಸಹಯೋಗದಲ್ಲಿ, ಆರ್ಥಿಕ ನೆರವು ಪಡೆದು ಅಧ್ಯಯನ ನಡೆಸಲು ನೀಡುವ ಸ್ಕಾಲರ್‌ಶಿಪ್ ಇದಾಗಿದೆ. ವಿದ್ಯಾರ್ಥಿ ಇಂಟರ್ನ್‌ಶಿಪ್ ಅಥವಾ ಫೆಲೊಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ: ಜಲವಿಜ್ಞಾನ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸ್ಟೂಡೆಂಟ್ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಜಲವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಪಿಎಚ್‌ಡಿ ಪಡೆದವರು ಮತ್ತು ಸರಕಾರಿ ಅನುದಾನಿತ ರಕ್ಷಣೆ ಮತ್ತು ಸಂಶೋಧನೆ ಪ್ರಯೋಗಾಲಯ(ಆರ್ ಆ್ಯಂಡ್ ಡಿ ಲ್ಯಾಬ್)/ಎಸ್ ಆ್ಯಂಡ್ ಟಿ ಸಂಸ್ಥೆ/ ಭಾರತದ ಮಾನ್ಯತೆ ಪಡೆದ ಸಂಸ್ಥೆಗಳೊಂದಿಗೆ ಸಂಯೋಜನೆಗೊಂಡಿರುವವರು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾ ಫೆಲೋಶಿಪ್/ಇಂಟರ್ನ್‌ಶಿಪ್‌ನ ಅವಧಿಯವರೆಗೆ ವಿಮಾನ ಪ್ರಯಾಣದ ದರ, ಮಾಸಿಕ ಸ್ಟೈಪೆಂಡ್, ಸಾದಿಲ್ವಾರು ಭತ್ತೆ, ಆರೋಗ್ಯವಿಮೆ ಹಾಗೂ ಆಂಶಿಕ ಮನೆಬಾಡಿಗೆ ಭತ್ತೆ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟಂಬರ್ 30, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/WAR3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News