ಹನೂರು: ಮಾಕಳಿ ಬೇರು ಸಂಗ್ರಹಿಸುತ್ತಿದ್ದ ಎಂಟು ಮಂದಿ ಸೆರೆ

Update: 2019-09-22 18:02 GMT

ಹನೂರು, ಸೆ.22: ತಾಲೂಕಿನ ಕಾವೇರಿ ವನ್ಯಜೀವಿಧಾಮದಲ್ಲಿ ಮಾಕಳಿ ಬೇರು ಸಂಗ್ರಹಿಸುತ್ತಿದ್ದ ತಮಿಳುನಾಡು ಮೂಲದ ಮೂವರು ಮಹಿಳೆಯರು ಸೇರಿ  ಒಟ್ಟು ಎಂಟು ಮಂದಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಓರ್ವ ಬಾಲಕ ಸೇರಿದಂತೆ ಬಾಲರಾಜು, ಸೇಲ್ವರಾಜು, ಪೆರಿಯಾಸವರಿ, ಆರೋಗ್ಯಮೇರಿ, ವಿನೋದ್, ಸೂಸೈಯಿಮೇರಿ, ಇರುದಯರಾಜ್, ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆ ವಿವರ: ಕೌದಳ್ಳಿ ವನ್ಯಜೀವಿ ವಲಯದ ಬೆಜ್ಜಲನಾಣೆ ಬಿಟ್ ಬಿಳಿಗುಂಡ್ಲು ಬಳಿ ತಮಿಳುನಾಡು ಮೂಲದ ತಂಡವೂಂದು ಬೀಡು ಬಿಟ್ಟು ಉರುಳು ಹಾಕಿ ಪ್ರಾಣಿಗಳನ್ನು ಬೇಟೆಯಾಡುವ ಹಾಗೂ ಮಾಕಳಿ ಬೇರು ಸಂಗ್ರಹಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ 40 ಕೆಜಿಯಷ್ಟು ಮಾಕಳಿ ಬೇರು, 12 ಉರುಳು ಹಾಗೂ ಅದನ್ನು ತೆಗೆಯಲು ಬಳಸುತ್ತಿದ್ದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾವೇರಿ ವನ್ಯಧಾಮದ ಉಪರಣ್ಯಾಧಿಕಾರಿ ರಮೇಶ್ ರವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು, ವಲಯ ಅರಣ್ಯಾ ಸಂರಕ್ಷಣಾಧಿಕಾರಿ ವಿನಯ್‍ ಕುಮಾರ್, ನಿಶ್ಚಿತ್, ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News