ಕರ್ನಾಟಕ ಮುಸ್ಲಿಂ ಜಮಾಅತ್ ದಾವಣಗೆರೆ ಜಿಲ್ಲಾ ಸಮಿತಿ ರಚನೆ

Update: 2019-09-23 06:42 GMT

ದಾವಣಗೆರೆ, ಸೆ.23: ಕರ್ನಾಟಕ ಮುಸ್ಲಿಂ ಜಮಾಅತ್ ದಾವಣಗೆರೆ ಜಿಲ್ಲಾ ಸಮಿತಿ ರಚನೆ ಕಾರ್ಯಕ್ರಮ ನಗರದ ರಾಜಮಹಲ್ ಸಭಾಂಗಣದಲ್ಲಿ ರವಿವಾರ ನಡೆಯಿತು.

ಕರ್ನಾಟಕ ಮುಸ್ಲಿಂ ಜಮಾತ್ ರಾಜ್ಯ ಉಪಾಧ್ಯಕ್ಷ ಅಬೂ ಸುಫಿಯಾನ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಯೋಜನಾ ಸಮಿತಿಯ ಅಧ್ಯಕ್ಷರಾದ ಹಮೀದ್ ಬಜ್ಪೆ ಕೆಎಂಜೆಯ ಯೋಜನೆಯನ್ನು ವಿವರಿಸಿದರು.

ವಿಷಯ ಮಂಡನೆ ಮಾಡಿ ಮಾತಾಡಿದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾಫಿ ಸಅದಿ, ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಮುಸ್ಲಿಂ ನಾಯಕರು ಸಮುದಾಯದ ವಿಚಾರ ಬಂದಾಗ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಅಭಿಪ್ರಾಯಿಸಿದರು.

ರಾಜ್ಯ ಉಪಾಧ್ಯಕ್ಷ ಸೈಯದ್ ಸೈಪುಲ್ಲಾ ಸಾಬ್, ಚಮ್ಮಾನ್ ಸಾಬ್, ಕಾರ್ಯದರ್ಶಿ ಯಾಕುಬ್ ಯೂಸುಫ್ ಹೊಸ ನಗರ, ನಾಯಕರಾದ ಅಶ್ರಫ್ ಕಿನಾರ ಮಂಗಳೂರು, ಫಾರೂಕ್ ಪಾಷ ಬೆಂಗಳೂರು, ಎಸ್ಸೆಸ್ಸೆಫ್ ನಾಯಕರಾದ ಕೆ.ಕೆ.ಸಖಾಫಿ, ಜುನೈದ್ ಸಖಾಫಿ ಉಪಸ್ಥಿತರಿದ್ದರು.

ಕರ್ನಾಟಕ ಮುಸ್ಲಿಂ ಜಮಾತ್ ದಾವಣಗೆರೆ ಜಿಲ್ಲಾ ನೂತನ ಜಿಲ್ಲಾ ಸಮಿತಿಯನ್ನು ಶಾಫಿ ಸಅದಿ ಘೋಷಿಸಿದರು. ಅಧ್ಯಕ್ಷರಾಗಿ ಜೆ.ಅಮಾನುಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿಯಾಗಿ ಸಯೀದ್ ಚಾರ್ಲಿ ಹಾಗೂ ಕೋಶಾಧಿಕಾರಿಯಾಗಿ ಹಕ್ಕಾನಿ ಅಥಾವುಲ್ಲಾ ಸಾಬ್ ಅವರನ್ನು ಹಾಗೂ ಇನ್ನಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News