ಬುಡಕಟ್ಟು ವ್ಯಕ್ತಿಯ ಗುಂಪು ಹತ್ಯೆಯ ಹಿಂದೆ ಬಜರಂಗದಳ ಕಾರ್ಯಕರ್ತರು: ಗ್ರಾಮಸ್ಥರ ಆರೋಪ

Update: 2019-09-24 09:34 GMT
Photo: www.indiatoday.in

ಹೊಸದಿಲ್ಲಿ, ಸೆ.24: ಬೀಫ್ ಮಾರಾಟ ಮಾಡಿದ್ದಾನೆ ಎಂಬ ಶಂಕೆಯಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬರನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಜಾರ್ಖಂಡ್ ನಲ್ಲಿ ನಡೆದಿದ್ದು, ಈ ಕೃತ್ಯದ ಹಿಂದೆ ಬಜರಂಗದಳದ ಕೈವಾಡವಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಗ್ರಾಮಸ್ಥರು ಬುಡಕಟ್ಟು ವ್ಯಕ್ತಿ ಕಲಂತುಸ್ ಬಾರ್ಲ ಅವರ ಹತ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈ ಕೃತ್ಯದ ಹಿಂದೆ ಬಜರಂಗದಳವಿದೆ ಎಂದು ಆರೋಪಿಸಿದ್ದಾರೆ.

ರವಿವಾರದ ಘಟನೆಯಿಂದ ಆತಂಕಗೊಂಡಿರುವ ಗ್ರಾಮದ ಮಹಿಳೆಯರು ಹೊರಗಿನ ಯಾರಿಗೂ ಗ್ರಾಮಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲವೆಂದು ಶಪಥ ಮಾಡಿದ್ದಾರೆ. ತಾವು ಪ್ರತಿ ವರ್ಷ ಸಾಂಪ್ರದಾಯಿಕ ‘ಬಡಗಡಿ ಪೂಜೆ ’ಯನ್ನು ನೆರವೇರಿಸುತ್ತಿದ್ದು, ಈ ಸಂದರ್ಭದಲ್ಲಿ ಪ್ರಾಣಿಯೊಂದನ್ನು ಕೊಂದು ಮಾಂಸವನ್ನು ಹಂಚಲಾಗುತ್ತದೆ ಎಂದು ಈ ಮಹಿಳೆಯರು ಸುದ್ದಿಗಾರರಿಗೆ ತಿಳಿಸಿದರು.

ಬಾರ್ಲಾ ಸಾವಿಗೆ ದುಃಖವನ್ನು ವ್ಯಕ್ತಪಡಿಸಿದ ಅವರು,ಆತನದೇನೂ ತಪ್ಪಿಲ್ಲ ಮತ್ತು ಆತ ಪೂಜೆಯಲ್ಲಿ ಪಾಲ್ಗೊಳ್ಳಲು ಸೋದರಿಯ ಮನೆಗೆ ಬಂದಿದ್ದ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News