ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭೂಕಂಪ; 5 ಸಾವು

Update: 2019-09-24 12:43 GMT

 ಕರಾಚಿ, ಸೆ.24: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೀರ್ ಪುರದಲ್ಲಿ ಮಂಗಳವಾರ  ಸಂಭವಿಸಿದ ಭೂಕಂಪಕ್ಕೆ ಐವರು ಬಲಿಯಾಗಿದ್ದಾರೆ. 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅಪರಾಹ್ನ 4:30ರ ಹೊತ್ತಿಗೆ ಪಾಕಿಸ್ತಾನದ ಹಲವಡೆ ಭೂಕಂಪ ಉಂಟಾಗಿದೆ. 

ಭೂಕಂಪದಿಂದ  ಹಲವು ಕಟ್ಟಡಗಳಿಗೆ ಹಾನಿಯಾಗಿವೆ. ರಿಕ್ಟರ್ ಮಾಪಕದಲ್ಲಿ  6.3ರಷ್ಟು ತೀವ್ರತೆ ದಾಖಲಾಗಿದೆ. ಜಾಟ್ಲಾನ್ ನಲ್ಲಿ ಭೂ ಕಂಪದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ.

 ಉತ್ತರ ಭಾರತದಲ್ಲೂ ಹಲವು ರಾಜ್ಯಗಳಲ್ಲೂ ಭೂಮಿ ಕಂಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News